ಕಾಸರಗೋಡು: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಲ್ಲಿ ಕುಸಿದು ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ಅಡ್ಕತ್ತಬೈಲ್, ಸತ್ಯನಾರಾಯಣ ಮಠದ ಸಮೀಪದ ಕೃಷ್ಣ ನಿಲಯ ನಿವಾಸಿ ದಿವಂಗತ ಕೃಷ್ಣನ್ ಅವರ ಪುತ್ರ ಕೆ. ಬಾಬು (60) ಮೃತಪಟ್ಟವರು.
ಎಂಟು ಮಂದಿ ಸದಸ್ಯರ ತಂಡ ಇಂದು (ಮಂಗಳವಾರ) ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಸಮುದ್ರದ ಮಧ್ಯಭಾಗಕ್ಕೆ ತಲುಪಿದಾಗ ಬಾಬು ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಬಳಿಕ ದೋಣಿಯಲ್ಲೇ ಕುಸಿದು ಬಿದ್ದರು. ಕೂಡಲೇ ದಡಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಾಜಿ ಅನಿವಾಸಿಯಾಗಿದ್ದ ಬಾಬು ಕಾಸರಗೋಡು ಕಡಪ್ಪುರ ಶ್ರೀ ಕುರುಂಬಾ ಭಗವತಿ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಮೃತರು ತಾಯಿ ಮಗು, ಪತ್ನಿ ವಾರಿಜ, ಮಕ್ಕಳಾದ ಅಂಜನಾ, ಅಮಯ, ಸಹೋದರರ ಸಹೋದರಿಯರಾದ: ಕುಮಾರನ್, ವಸಂತಿ, ವಳ್ಳಿ, ಸೀಮಂತಿ ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
