ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ಯುವಕನೊಬ್ಬ ಕೊಲೆಯಾಗಿದ್ದಾನೆ. ಕರ್ನಾಟಕ ಮೂಲದ ರಮೇಶ್ (42) ಎಂಬಾತನೇ ಮೃತಪಟ್ಟವರು.
ಇಂದು (ಶುಕ್ರವಾರ) ರಾತ್ರಿ ಸುಮಾರು 7.45ರ ವೇಳೆಗೆ ಹೊಸಂಗಡಿಯಲ್ಲಿರುವ ಹಳೆಯ ಮನೆಯೊಂದರಲ್ಲಿ ತಲೆ ಛಿದ್ರಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಕೊಲೆಯ ಹಿಂದೆ ಇದ್ದಾರೆಂದು ಶಂಕಿಸಲಾದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದೆ.
Tags
ಮಂಜೇಶ್ವರ
