ಉಬ್ರಂಗಳದಲ್ಲಿ ಸಹೋದರರಿಬ್ಬರು ಗಂಟೆಗಳ ಅಂತರದಲ್ಲಿ ಹೃದಯಾಘಾತದಿಂದ ಮೃತ್ಯು



ಕುಂಬ್ಡಾಜೆ: ಅಣ್ಣ ಹೃದಯಾಘಾತದಿಂದ ಮೃತಪಟ್ಟ ಗಂಟೆಯೊಳಗೆ ತಮ್ಮನೂ ಕುಸಿದು ಬಿದ್ದು ಹೃದಯಾಘಾತದಿಂದ‌ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಬ್ಡಾಜೆ ಬಳಿಯ ಉಬ್ರಂಗಳ ದಿ.ವೆಂಕಟ್ರಮಣ ಭಟ್ಟರ ಮಕ್ಕಳಾದ ರಾಮಕೃಷ್ಣ ಭಟ್(70), ತಮ್ಮ ಕೇಶವ ಭಟ್(65) ಮೃತಪಟ್ಟವರು. ನಿನ್ನೆ (ಆದಿತ್ಯವಾರ) ಸಂಜೆ 7 ಗಂಟೆಯ ವೇಳೆ ರಾಮಕೃಷ್ಣ ಭಟ್, ರಾತ್ರಿ 10.30 ರ ವೇಳೆ ಕೇಶವ ಭಟ್ ನಿಧನರಾಗಿದ್ದಾರೆ.

       ಸಾಯಂಕಾಲ ರಾಮಕೃಷ್ಣ ಭಟ್ ಅವರು ಜಾನುವಾರುಗಳಿಗೆ ಬಾಯಾರಿಕೆ ನೀಡಲು ಹಟ್ಟಿಗೆ ಹೋಗಿದ್ದರು. ಈ ವೇಳೆ ಕೇಶವ ಭಟ್ ಪೂಜೆಯಲ್ಲಿದ್ದರು.‌ಪೂಜೆ ಮುಗಿಸಿದ ಕೇಶವ ಭಟ್ ನೋಡಿದಾಗ  ರಾಮಕೃಷ್ಣ ಭಟ್ ಹಟ್ಟಿಯ ಬಳಿ ಬಿದ್ದಿರುವುದು ಕಂಡು ಬಂತು.‌‌ಕೂಡಲೇ  ಸ್ಥಳೀಯರನ್ನು ಕರೆದು ಅವರ ಸಹಾಯದೊಂದಿಗೆ ರಾಮಕೃಷ್ಣ ಭಟ್ಟರನ್ನು ಮುಳ್ಳೇರಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ತಪಾಸಣೆ ಮಾಡಿದಾಗ ರಾಮಕೃಷ್ಣ ಭಟ್ ನಿಧನರಾದ ಮಾಹಿತಿ ತಿಳಿಯಿತು. ರಾತ್ರಿ 10.30 ರ ವೇಳೆ ಕೇಶವ ಭಟ್ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ತಲುಲಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು. ಮೃತರಿಬ್ಬರೂ ಅವಿವಾಹಿತರಾಗಿದ್ದಾರೆ. ಮೃತರು ಸಹೋದರ ಸುಬ್ರಾಯ ಭಟ್, ಸಹೋದರಿಯರು ಎಂಬಿವರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು