ಪೆರ್ಲ : ಕಥೊಲಿಕ್ ಸಭಾ ಉಕ್ಕಿನಡ್ಕ ಘಟಕ ಆರೋಗ್ಯ ಆಯೋಗ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಮತ್ತು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಉಕ್ಕಿನಡ್ಕ ಇಗರ್ಜಿ ಸಭಾಂಗಣದಲ್ಲಿ ನಡೆಯಿತು
ಕಾರ್ಯಕ್ರಮವನ್ನು ಇಗರ್ಜಿಯ ಧರ್ಮಗುರುಗಳಾದ ರೆ.ಫಾ ಗಿಲ್ಬರ್ಟ್ ಮಸ್ಕರೆನ್ಹಸ್ ಅವರು ಉದ್ಘಾಟಿಸಿದರು.
ಡಾ ಪ್ರಥಮ ಮಾಹಿತಿ ನೀಡಿದರು.ಪಾಲನ ಸಮಿತಿ ಉಪಾಧ್ಯಕ್ಷೆ ನೀತಾ ಕ್ರಾಸ್ತಾ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ, ಆಯೋಗದ ಸಂಯೋಜಕರಾದ ಪಾವ್ಲ್ ಡಿಸೋಜ ಆರೋಗ್ಯ ಆಯೋಗದ ಸಂಚಾಲಕ ತಿಮೊಥಿ ರೊಡ್ರಿಗಸ್ ಹಾಜರಿದ್ದರು.ಆ್ಯರಲ್ ಹಾಗೂ ಆ್ಯನ್ಸಲ್ ಪ್ರಾರ್ಥನೆ ಹಾಡಿದರು.
ಕಥೊಲಿಕ್ ಸಭಾ ಅಧ್ಯಕ್ಷ ವಿನ್ಸೆಂಟ್ ಸ್ವಾಗತಿಸಿ ಕಾರ್ಯದರ್ಶಿ ಅಮಿತ್ ವಂದಿಸಿದರು. ಸಂದ್ಯಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು
ನಂತರ ಕಣ್ಣಿನ ತಪಾಸಣ ನಡೆಯಿತು ನೂರಾರು ಮಂದಿ ಇದರ ಉಪಯೋಗ ಪಡೆದುಕೊಂಡರು.
Tags
ಉಕ್ಕಿನಡ್ಕ
