ಉಬ್ರಂಗಳ ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದ ಮೂರು ಮಂದಿಯ ಅಕಾಲಿಕ ನಿಧನ


 ಕುಂಬ್ಡಾಜೆ: ಕುಂಬ್ಡಾಜೆ ಪಂಚಾಯತು ವ್ಯಾಪ್ತಿಯ ಉಬ್ರಂಗಳದಲ್ಲಿ ಒಂದೇ ದಿನ ಇಬ್ಬರು ಸಹೋದರರು ಸಹಿತ ಮೂರು ಮಂದಿ ನಿಧನರಾದ ಘಟನೆ ಪರಿಸರದಲ್ಲಿ ಶೋಕ ಸಾಗರ ಸೃಷ್ಟಿಸಿದೆ. ಉಬ್ರಂಗಳ ನಿವಾಸಿ ಸಹೋದರರಾದ ರಾಮಕೃಷ್ಣ ಭಟ್(70), ಕೇಶವ ಭಟ್ (65) ಅವರು ಗಂಟೆಗಳ ಅಂತರದಲ್ಲಿ ಕುಸಿದು ಬಿದ್ದು ಮೃತಪಟ್ಟರೆ, ಸಮೀಪದ ನಿವಾಸಿ ದಾಮೋದರನ್ (64) ಕಾಸರಗೋಡು ‌ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 

   ನಿನ್ನೆ  ಸಾಯಂಕಾಲ ರಾಮಕೃಷ್ಣ ಭಟ್ ಅವರು ಜಾನುವಾರುಗಳಿಗೆ ಬಾಯಾರಿಕೆ ನೀಡಲು ಹಟ್ಟಿಗೆ ಹೋಗಿದ್ದರು. ಈ ವೇಳೆ ಕೇಶವ ಭಟ್ ಪೂಜೆಯಲ್ಲಿದ್ದರು.‌ಪೂಜೆ ಮುಗಿಸಿದ ಕೇಶವ ಭಟ್ ನೋಡಿದಾಗ  ರಾಮಕೃಷ್ಣ ಭಟ್ ಹಟ್ಟಿಯ ಬಳಿ ಬಿದ್ದಿರುವುದು ಕಂಡು ಬಂತು.‌‌ಕೂಡಲೇ  ಸ್ಥಳೀಯರನ್ನು ಕರೆದು ಅವರ ಸಹಾಯದೊಂದಿಗೆ ರಾಮಕೃಷ್ಣ ಭಟ್ಟರನ್ನು ಮುಳ್ಳೇರಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ತಪಾಸಣೆ ಮಾಡಿದಾಗ ರಾಮಕೃಷ್ಣ ಭಟ್ ನಿಧನರಾದ ಮಾಹಿತಿ ತಿಳಿಯಿತು. ರಾತ್ರಿ 10.30 ರ ವೇಳೆ ಕೇಶವ ಭಟ್ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ತಲುಲಿಸಿದರೂ ಪ್ರಾಣ ಉಳಿಸಲಾಗಲಿಲ್ಲ.
    ಅಸೌಖ್ಯದಿಂದಾಗಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಾಮೋದರನ್ ಇಂದು(ಸೋಮವಾರ) ಬೆಳಗ್ಗೆ ಕೊನೆಯುಸಿರೆಳೆದರು. ಮೂರು ಮಂದಿಯ ಅಂತ್ಯ ಸಂಸ್ಕಾರವು ನೂರಾರು ಜನರ ಅಂತಿಮ ದರ್ಶನ, ಅಶ್ರುತರ್ಪಣದೊಂದಿಗೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು