ಉಕ್ಕಿನಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರುಕುಡಿಕೆ ಉತ್ಸವ ಸೆಪ್ಟೆಂಬರ್ 6ರಂದು


 ಉಕ್ಕಿನಡ್ಕ : ಉಕ್ಕಿನಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಆಶ್ರಯದಲ್ಲಿ 15 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರುಕುಡಿಕೆ ಉತ್ಸವವು ಸೆಪ್ಟೆಂಬರ್ 6ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬದಿಯಡ್ಕ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯ ಮಧುಸೂದನ ಕಂಗಿಲ ಉದ್ಘಾಟಿಸುವರು. ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಸುರೇಶ್ ನೆಲ್ಲಿಕುಂಜೆ ಅಧ್ಯಕ್ಷತೆ ವಹಿಸಯವರು. ಡಾ. ಪಲ್ಲವಿ ಉಕ್ಕಿನಡ್ಕ ಹಾಗೂ ಎಣ್ಮಕಜೆ ಗ್ರಾಮ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂದಿರ ಸಮಿತಿ ಅಧ್ಯಕ್ಷ ಡಾ. ಜಯಗೋವಿಂದ ಉಕ್ಕಿನಡ್ಕ ಹಾಗೂ ಪ್ರಧಾನ ಅರ್ಚಕ ರಾಜಶೇಖರ ಕಂಗಿಲ ಶುಭ ಹಾರೈಸಲಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಕೃಷ್ಣವೇಷ, ಮೊಸರು ಕುಡಿಕೆ, ಹಗ್ಗ ಜಗ್ಗಾಟ ಸಹಿತ ವುವಿದ ಸ್ಪರ್ಧೆಗಳು ನಡೆಯಲಿವೆ.

ಸಂಜೆ 6.30ಕ್ಕೆ ಲಕ್ಕಿಡಿಪ್ ಡ್ರಾ ಹಾಗೂ ಅನಂತರ ಬಹುಮಾನ ವಿತರಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು