ಫ್ಯಾನ್ಸಿ ಅಂಗಡಿಗೆಂದು ಮನೆಯಿಂದ ಹೊರಟ ಯುವತಿ ನಾಪತ್ತೆ; ಪೊಲೀಸರಿಂದ ತನಿಖೆ ಆರಂಭ


 ಬದಿಯಡ್ಕ: ಫ್ಯಾನ್ಸಿ ಅಂಗಡಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ 18 ವರ್ಷದ ಯುವತಿ ನಾಪತ್ತೆಯಾದ ಘಟನೆ ನಡೆದಿದೆ.

         ಕುಂಬ್ಡಾಜೆ ಮವ್ವಾರ್ ಬಳಿಯ ವಡಂಬಳ ಹೌಸ್ ನಿವಾಸಿ ವಿ. ಹರ್ಷಿತಾ (18) ನಾಪತ್ತೆಯಾದವರು. ಮುಳ್ಳೇರಿಯಾದಲ್ಲಿರುವ ಫ್ಯಾನ್ಸಿ ಅಂಗಡಿಗೆ ಹೋಗುವುದಾಗಿ ಹೇಳಿ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಯುವತಿ ಮನೆಯಿಂದ ಹೊರಟಿದ್ದರು. ಆ ಬಳಿಕ ವಾಪಸ್ ಬಂದಿಲ್ಲವೆಂದೂ, ಜಾಲ್ಸೂರು, ಪರಪ್ಪದ ಗೆಳೆಯನ ಜತೆ  ತೆರಳಿರಬಹುದು ಎಂದು ಶಂಕಿಸಲಾಗಿದೆ.  ಯುವತಿಯ ಸಹೋದರಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು