ಸಿಪಿಐ ಲೋಕಲ್ ಸಮಿತಿ ಸದಸ್ಯನ‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕಾಸರಗೋಡು: ಸಿಪಿಐ ಲೋಕಲ್ ಸಮಿತಿ ಸದಸ್ಯನ‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುತ್ತಿಕೋಲ್ ಲೋಕಲ್ ಸಮಿತಿ ಸದಸ್ಯ ಹಾಗೂ ಚೆರಿಯಕಯ ನಿವಾಸಿ ಅಶೋಕನ್ (49) ಅವರ ಮೃತದೇಹ  ಹೋಟೆಲ್ ಅಡುಗೆಮನೆಯಲ್ಲಿ  ಪತ್ತೆಯಾಗಿದೆ. ಹೋಟೆಲ್‌ಗೆ ಚಹಾ ಕುಡಿಯಲು ಬಂದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ವರ್ಷಗಳಿಂದ ಕುತ್ತಿಕೋಲಿನ  ಸರಕಾರಿ ಸ್ಥಳದಲ್ಲಿ ಸಣ್ಣದಾಗಿ ಗಂಜಿ ಅಂಗಡಿ ನಡೆಸುತ್ತಾ ಜೀವಿಸುತ್ತಿದ್ದರು. ಎಂದಿನಂತೆ ಇಂದು (ಸೋಮವಾರ) ಬೆಳಿಗ್ಗೆ ಮನೆಯಿಂದ ಹೋಟೆಲಿಗೆ ತೆರಳಿದ್ದರು. ಆತ್ಮಹತ್ಯೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.

ನಾಟಕ ನಟ ಹಾಗೂ ಕಲಾ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅಶೋಕನ್ ಅವರ ಅನಿರೀಕ್ಷಿತ ಅಗಲಿಕೆ ನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಬೇಡಗಂ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು

ತಾಯಿ ನಾರಾಯಣಿ. ಪತ್ನಿ ಸಜಿತಾ (ಪಿಗ್ಮಿ ಕಲೆಕ್ಷನ್ ಏಜೆಂಟ್). ಮಕ್ಕಳಾದ ಉತ್ತರಾ (ವಿದ್ಯಾರ್ಥಿನಿ, ಕುಟ್ಟಿಕೋಲು ಸರಕಾರಿ ಪ್ರೌಢಶಾಲೆ), ಅಕ್ಷರಾ (ಎ.ಯು.ಪಿ.ಶಾಲೆ, ಕುಟ್ಟಿಕೋಲು). ಸಹೋದರರ ಸಹೋದರಿಯರಾದ ಎ.ಟಿ. ವಿಜಯನ್, ರಮಣಿ, ಬೇಬಿ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು