ವಿವಾಹಿತ ಮಹಿಳೆಯ ಮೃತದೇಹ ನೆರೆಮನೆಯ ಬಾವಿಯಲ್ಲಿ‌ ಪತ್ತೆ


 ದೇಲಂಪಾಡಿ: ವಿವಾಹಿತೆಯೊಬ್ಬರು ನೆರೆಮನೆಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ದೇಲಂಪಾಡಿಯ ಸಜಿತ್ ಎಂಬುವರ ಪತ್ನಿ ಸುಶೀಲ (44) ಮೃತಪಟ್ಟವರು. ನಿನ್ನೆ (ಆದಿತ್ಯವಾರ) ಮಧ್ಯಾಹ್ನ 12 ರಿಂದ 1 ಗಂಟೆಯ ಮಧ್ಯೆ ಈ ಘಟನೆ ಸಂಭವಿಸಿದೆ. ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಕಾಣದ ಕಾರಣ ಹುಡುಕಾಟ ನಡೆಸಿದಾಗ, ನೆರೆಮನೆಯವರ ಬಾವಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಇವರು ಕರ್ನಾಟಕದ ಬೆಟ್ಟಂಪಾಡಿ ಮೂಲದವರಾಗಿದ್ದಾರೆ. ಇವರಿಗೆ ಸಂದೀಪ್ ಎಂಬ ಒಬ್ಬನೇ ಮಗನಿದ್ದು, ಕಮಲಾ, ಸುಮಿತ್ರ ಹಾಗೂ ಮಾಧವ ಎಂಬ ಸಹೋದರ-ಸಹೋದರಿಯರಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು