ಕಾಸರಗೋಡು ಮೀಪುಗುರಿ ನಿವಾಸಿಗಳಾದ ತಂದೆ ಹಾಗೂ ಪುತ್ರಿಯ ಮೃತದೇಹ ಚೆಮ್ನಾಡು ಬಳಿ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 

ಕಾಸರಗೋಡು: ಕಾಸರಗೋಡು ಮೀಪುಗುರಿ ನಿವಾಸಿಗಳಾದ ತಂದೆ ಹಾಗೂ ಪುತ್ರಿಯ ಮೃತದೇಹ ಚೆಮ್ನಾಡು ಬಳಿ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಮೀಪುಗುರಿಯ ಗಣೇಶನ್ (55), ಪುತ್ರಿ ಹಾಗೂ ಪರವನಡ್ಕ ಸರಕಾರೀ ಹೈಯರ್ ಸೆಕಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ವೈಷ್ಣವಿ(17) ಮೃತಪಟ್ಟವರು. ನಿನ್ನೆ (ಶನಿವಾರ) ರಾತ್ರಿ 11.10 ರ ವೇಳೆ ಚೆಮ್ನಾಡ್ ಕೋಳಿಯಡ್ಕಂ ಶಿವಪುರ ಕ್ಷೇತ್ರ ಬಳಿಯ ಬಾಡಿಗೆ ಮನೆಯ ಮಲಗುವ ಕೋಣೆಯಲ್ಲಿ  ಮೃತದೇಹ ಕಂಡು ಬಂದಿದೆ.  ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಣೇಶರ ಪತ್ನಿ ಓಮನ ಹೋಂ ನರ್ಸ್ ಆಗಿದ್ದು ಕರ್ತವ್ಯಕ್ಕೆ ತೆರಳಿದ್ದರು. ಪುತ್ರ ವಿಷ್ಣು ಕ್ಯಾಟರಿಂಗ್ ಕೆಲಸಕ್ಕೆ ತೆರಳಿದ್ದನು.

  ನಿನ್ನೆ ರಾತ್ರಿ 10 ಗಂಟೆಯ ವೇಳೆ ಮನೆಯಿಂದ ಹೊರಬಂದ ಗಣೇಶನ್ ತನ್ನ ಮಗಳು ನಾಪತ್ತೆಯಾಗಿರುವುದಾಗಿ‌ ನೆರೆ ಮನೆಯವರಲ್ಲಿ ಹೇಳಿದ್ದನು. ಅನಂತರ ಮನೆಯೊಳಗೆ ಹೋದ ಗಣೇಶನ್ ಬಾಗಿಲು ಹಾಕಿದ್ದನು. ಈ ಬಗ್ಗೆ ಶಂಕೆಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಗಮಿಸಿ ಬಾಗಿಲು ಒಡೆದು ನೋಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ. 

ತಂದೆ ಹಾಗೂ‌ ಮಗಳು ಆತ್ಮಹತ್ಯೆಗೈದ ಇದೇ ಮನೆಯಲ್ಲಿ ಓ ಹಿಂದೆಯೂ ಆತ್ಮಹತ್ಯೆ ನಡೆದಿತ್ತೆಂದು‌ ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು