ಸಹೋದರರ ಜತೆ ಕೊಳದಲ್ಲಿ ಸ್ನಾನ ಮಾಡಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು


 ಕಾಸರಗೋಡು: ಸಹೋದರರೊಂದಿಗೆ ಕೊಳದಲ್ಲಿ ಸ್ನಾನ ಮಾಡಲು ತೆರಳಿದ್ದ ವಿದ್ಯಾರ್ಥಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ವಿದ್ಯಾ‌ನಗರದ ಚಾಲಾ, ಬಿ.ಎಡ್ ಸೆಂಟರ್ ಸಮೀಪದ ಅಬೂಬಕರ್ ಎಂಬುವರ ಪುತ್ರ ಮೊಹಮ್ಮದ್ ಶಾಹಿದ್ (16) ಮೃತಪಟ್ಟ ವಿದ್ಯಾರ್ಥಿ.

ಇಂದು (ಸೋಮವಾರ) ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ದಾರುಣ ಘಟನೆ ಸಂಭವಿಸಿದೆ. ಅಬೂಬಕರ್ ಮತ್ತು ಕುಟುಂಬವು ಪ್ರಸ್ತುತ ವಿದ್ಯಾ‌ನಗರದ ಉದಯಗಿರಿ ಕೈಲಾಸಪುರದಲ್ಲಿ ವಾಸಿಸುತ್ತಿದೆ. ಶಾಹಿದ್ ಹಾಗೂ ಇಬ್ಬರು ಸಹೋದರರು ಉದಯಗಿರಿ ಸಮೀಪದ ಕೊಳದಲ್ಲಿ ಸ್ನಾನ ಮಾಡಲು ಇಳಿದಿದ್ದಾಗ ಈ ಅಪಘಾತ ಸಂಭವಿಸಿದೆ.

ವಿಷಯ ತಿಳಿದು ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಶಾಹಿದ್ ಅವರನ್ನು ಹೊರತೆಗೆದರಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ. ನಾಯನ್ಮಾರ್ಮೂಲ ಟಿ.ಐ.ಎಚ್.ಎಸ್.ಎಸ್. ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು