ಕಾಸರಗೋಡು: ಅತಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ನಾಳೆ (ಅಗಸ್ಟ್ 3 ಸೋಮವಾರ) ಕಾಸರಗೋಡು ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಸಾರಿದ್ದಾರೆ. ವೃತ್ತಿಪರ ಕಾಲೇಜುಗಳು ಸಹಿತ ಎಲ್ಲಾ ಕಾಲೇಜುಗಳು, ಶಾಲೆಗಳು, ಅಂಗನವಾಡಿಗಳು, ನರ್ಸರಿಗಳು, ಕೇಂದ್ರೀಯ ವಿದ್ಯಾಲಯಗಳು, ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳು, ಟ್ಯೂಷನ್ ಕೇಂದ್ರಗಳು ಹಾಗೂ ಮದರಸಾಗಳಿಗೆ ರಜೆ ಅನ್ವಯವಾಗಲಿದೆ. ಈಗಾಗಲೇ ನಿಗದಿಪಡಿಸಿರುವ ಪರೀಕ್ಷೆಗಳು ಮತ್ತು ಸಂದರ್ಶನಗಳು ಎ೦ದಿನಂತೆ ನಡೆಯಲಿದ್ದು, ಅವುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು, ಕಣ್ಣೂರು, ಪತ್ತನಂತಿಟ್ಟ ಸಹಿತ 9 ಜಿಲ್ಲೆಗಳಲ್ಲಿ ನಾಳೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.
Tags
ಕಾಸರಗೋಡು
