ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿಯ ಆಶ್ರಯದಲ್ಲಿ ದಿ.ರಾಮ ಪಾಟಾಳಿ ಸಂಸ್ಮರಣೆ


 ಬದಿಯಡ್ಕ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್  ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರೂ ಮಂಡಲ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರೂ ಆದ ದಿವಂಗತ ಬಿ. ರಾಮ ಪಾಟಾಳಿಯವರ ಏಳನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಬದಿಯಡ್ಕ ಮಂಡಲ ಸಮಿತಿಯ  ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಂಡಲ ಸಮಿತಿಯ ಅಧ್ಯಕ್ಷ  ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಾರಿಜಾಕ್ಷನ್ ಅವರು ರಾಮ ಪಾಟಾಳಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ನಂತರ ನಡೆದ ಸಂಸ್ಮರಣಾ ಕಾರ್ಯಕ್ರಮವನ್ನು  ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮಾಮೂಣಿ ವಿಜಯನ್ ಅವರು ಉದ್ಘಾಟಿಸಿದರು.  ಬಾಲ ಮಂಚ್ ಜಿಲ್ಲಾ ಸಮಿತಿ ಅಧ್ಯಕ್ಷ  ಅಭಿಲಾಷ್,  ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ , ನೇತಾರರಾದ ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ , ಕುಂಜಾರು ಮುಹಮ್ಮದ್ ಹಾಜಿ,    ಎಂ. ಅಬ್ಬಾಸ್ , ಶ್ರೀನಾಥ್ ಬದಿಯಡ್ಕ, ಚಂದ್ರಹಾಸನ್ ಮಾಸ್ಟರ್ ,    ಲೀಲಾವತಿ ಕುಂಟಾಲು ಮೂಲೆ , ಅಶ್ವತಿ ಅಶೋಕನ್ , ಜಯರಾಮ ಕುಂಟಾಲು ಮೂಲೆ ಮೊದಲಾದವರು ಮಾತನಾಡಿದರು. ರವೀಂದ್ರ ಕುಂಟಾಲು ಮೂಲೆ,  ವಾಮನ ನಾಯ್ಕ್ , ರಾಮಕೃಷ್ಣ , ಸಿರಿಲ್ ಡಿ ಸೋಜ, ಅನಸೂಯ , ರಜನಿ  , ಖಮರುದ್ದೀನ್ ಬಣ್ಪುತ್ತಡ್ಕ , ಸತೀಶ್ ಪೆರುಮುಂಡ, ರಾಮ ಗೋಳಿಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಕೇಶವ ಪಾಟಾಳಿ ಸ್ವಾಗತಿಸಿದರು. ರಾಮ ಪಟ್ಟಾಜೆ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು