ಚೆರ್ಕಳ: ಬೋವಿಕಾನ, ಪೌವಲ್, ಮಾಸ್ತಿಕುಂಡು ಬಳಿ ಇಂದು (ಗುರುವಾರ) ಬೆಳಿಗ್ಗೆ ಶಾಲಾ ವಾಹನ ಹಾಗೂ ಬೈಕ್ ಡಿಕ್ಕಿ ಹೊಡೆದು ಉಂಟಾದ ನಡೆದ ಅಪಘಾತದಲ್ಲಿ ಗಾಳಿಮುಖಂ ನಿವಾಸಿ ಶಮ್ಮಾಸ್ (25) ಮೃತಪಟ್ಟ ಘಟನೆ ನಡೆದಿದೆ.
ಶಾಲಾ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಹೊಡೆದು ಈ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲಿದ್ದವರ ನೆರವಿನಿಂದ ಗಂಭೀರ ಗಾಯಗೊಂಡಿದ್ದ ಶಮ್ಮಾಸ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಅಪಘಾತದ ತೀವ್ರತೆಯಿಂದಾಗಿ ಮಾಸ್ತಿಕುಂಡು ರಸ್ತೆಯಲ್ಲಿ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.
Tags
ಕಾಸರಗೋಡು
