ಟ್ಯಾಂಕರ್ ಲಾರಿ ಹರಿದು ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು


ಕಾಸರಗೋಡು: ನಗರದ ಎಂ.ಜಿ. ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಬುಧವಾರ ಮಧ್ಯಾಹ್ನ ಟ್ಯಾಂಕರ್ ಲಾರಿ ಹರಿದು ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಳಂಗರೆ ಬಾಂಗೊಡ್ ನಿವಾಸಿ ಹನೀಫ (55) ಮೃತಪಟ್ಟವರು. ಇಂದು (ಗುರುವಾರ) ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಕೊನೆಯುಸಿರೆಳೆದರು.

ವಿದ್ಯಾನಗರ ಬಿಸಿ ರಸ್ತೆಯ ಫ್ಲೆಕ್ಸ್ ಅಂಗಡಿಯ ಮಾಲೀಕರಾಗಿದ್ದ ಹನೀಫ, ನಿನ್ನೆ (ಬುಧವಾರ) ಮಧ್ಯಾಹ್ನ ಹೊಸ ಬಸ್ ನಿಲ್ದಾಣದಿಂದ ಹಳೆಯ ಬಸ್ ನಿಲ್ದಾಣದ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಲಾರಿಢಿಕ್ಕಿ ಹೊಡೆದು ಸ್ಕೂಟರ್‌ನಿಂದ ಕೆಳಗೆ ಬಿದ್ದ ಹನೀಫರ ಕಾಲಿನ ಮೇಲೆ ಲಾರಿ ಹರಿದಿತ್ತು ಎಂದು ತಿಳಿದುಬಂದಿದೆ.

ಗಂಭೀರ ಗಾಯಗೊಂಡಿದ್ದ ಹನೀಫ ಅವರನ್ನು ಸ್ಥಳೀಯರು ಮೊದಲು ಜನರಲ್ ಆಸ್ಪತ್ರೆಗೆ ಮತ್ತು ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸಿಬಿರಿಯಾ,  ಮಕ್ಕಳಾದ ಉಸ್ನಾ, ಇಷಾಮ್ (ಗಲ್ಫ್), ಆನಿಯ, ಅಸ್ವ ಎಂಬಿವರನ್ನು ಅಗಲಿದ್ದಾರೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು