ಕುಂಬ್ಡಾಜೆ: ಇಲ್ಲಿನ ಕುದಿಂಗಿಲ ಕಟ್ಟದ ಕೋರಿಕ್ಕಾರು ನಿವಾಸಿ ಸುಬ್ಬ ಮಣಿಯಾಣಿ (54) ನಿಧನರಾದರು. ಕಿಡ್ನಿ ಸಂಬಂಧ ಖಾಯಿಲೆಯಿಂದಾಗಿ ಬಳಲುತ್ತಿದ್ದ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಕೊನೆಯುಸಿರೆಳೆದರು. ಸುಬ್ಬ ಮಣಿಯಾಣಿ ಅವರು ಈ ಹಿಂದೆ ಖಾಸಗಿ ಬಸ್ ಕಂಡೆಕ್ಟರ್ ಆಗಿದ್ದರು. ಮೃತರು ಪತ್ನಿ ಸಾವಿತ್ರಿ, ಸಹೋದರ ಸಹೋದರಿಯರಾದ ಕೃಷ್ಣ ಮಣಿಯಾಣಿ,ಲೀಲಾವತಿ, ಗೀತ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವ ಸಹೋದರ ನಾರಾಯಣ ಈ ಹಿಂದೆಯೇ ನಿಧನರಾಗಿದ್ದರು.
ಬಿಜೆಪಿ ಕೋಜಿಕ್ಕೋಡು ವಲಯ ಪ್ರದಾನ ಕಾರ್ಯದರ್ಶಿ ಸುಧಾಮ ಗೋಸಾಡ, ಬದಿಯಡ್ಕ ಮಂಡಲ ಸಮಿತಿ, ಕುಂಬ್ಡಾಜೆ ಪಂಚಾಯತು ಸಮಿತಿ, ಗ್ರಾಮ ಪಂಚಾಯತು ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ವಾರ್ಡು ಸದಸ್ಯೆ ನಯನ ಮೊದಲಾದವರು ಸಂತಾಪ ಸೂಚಿಸಿದರು.
Tags
ಕುಂಬ್ಡಾಜೆ
