ಕಾರಡ್ಕ ಪಂಚಾಯತು ಆಲಂತಡ್ಕ ಅಂಗನವಾಡಿಯಲ್ಲಿ ಓಣಂ ಆಚರಣೆ


 ಮುಳ್ಳೇರಿಯ: ಕಾರಡ್ಕ ಪಂಚಾಯತು 4 ನೇ ವಾರ್ಡು ಆಲಂತಡ್ಕ ಅಂಗನವಾಡಿಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಐಸಿಡಿಎಸ್ ಸುಪರ್ ವೈಸರ್ ಕಾವ್ಯಶ್ರೀ, ಮಂಜುಳ, ಗ್ರಾಮ ಪಂಚಾಯತು ಸದಸ್ಯೆ ವಸಂತಿ, ಆರೋಗ್ಯ ಅಧಿಕಾರಿ ಶ್ರೀಲಕ್ಷ್ಮಿ, ಆಶಾ ವರ್ಕರ್ ಸಾವಿತ್ರಿ,  ಮಕ್ಕಳು, ಹೆತ್ತವರು ಭಾಗವಹಿಸಿದರು. ಮಕ್ಕಳಿಗೂ ಹೆತ್ತವರಿಗೂ ವಿವಿದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಅಂಗನವಾಡಿ ಶಿಕ್ಷಕಿ ರೇವತಿ ಸಿ.ಎಚ್.ಸ್ವಾಗತಿಸಿ ಸಹಾಯಕಿ ಅಕ್ಷತಾ ಕೆ. ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು