ಕಾಞಂಗಾಡು: ಕಣಜದ ಹುಳುವಿನ ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತೆಂಗಿನಮರ ಏರುವ ಕಾರ್ಮಿಕ ಮೃತಪಟ್ಟಿದ್ದಾರೆ. ತಳಿಪರಂಬ ತಲೋರ ಅಂಗನವಾಡಿ ಸಮೀಪ ವಾಸಿಸುತ್ತಿದ್ದ ತುಂಡಿ ವಳಪ್ಪಿಲ್ ಗೋಕುಲ ದಾಸ್ (47) ಮೃತಪಟ್ಟವರು.
ಆಗಸ್ಟ್ 29ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಣಜದ ಹುಳ ಕಚ್ಚಿತ್ತು. ಗಂಭೀ ತಳಿಪರಂಬು ಪുഴಕ್ಕುಳಂಗರ ಎಂಬಲ್ಲಿ ಕಾಪಾಲಿಕುಳಂಗರ ದೇವಸ್ಥಾನದ ಸಮೀಪ ವಾಸಿಸುವ ಗೋಪಾಲನ್ ಅವರ ಮನೆಯಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಮರದಲ್ಲಿದ್ದ ಕಣಜಗಳು ಕಚ್ಚಿದ್ದವು. ತಕ್ಷಣ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮುಂಜಾನೆ ಅವರು ಮೃತಪಟ್ಟರು.
ಮೃತರು ದಿವಂಗತ ಕಣ್ಣನ್ ಮತ್ತು ನಾಣಿಯವರ ಪುತ್ರ. ಪತ್ನಿ: ಶೈನಿ. ಮಕ್ಕಳು: ಇಷಾನ್, ನಂದನಾ. ಸಹೋದರರು: ದೇವದಾಸನ್, ವತ್ಸಲ, ಪ್ರಸಾದ್.
Tags
ಕಾಞಂಗಾಡ್
