ಮಾವನನ್ನು ಕತ್ತಿಯಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ ಅಳಿಯನ ಬಂಧನ


 

ಕಾಸರಗೋಡು: ಪರಪ್ಪದಲ್ಲಿ ಅಳಿಯನೊಬ್ಬ ಮಾವನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಪಟ್ಲಂ ಉನ್ನತಿಯ ಮಾಜಿ ಎಸ್‌ಟಿ ಪ್ರಮೋಟರ್ ಕೆಳಮನೆಯ ಕಣ್ಣನ್ (48) ಅವರನ್ನು ಕಾಞ್ಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಣ್ಣನ್ ಅವರ ಸಹೋದರಿ ಪುತ್ರ ದಿನೇಶ್ (25)ನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಮಧ್ಯಾಹ್ನ ದಿನೇಶ್ ಕಣ್ಣನ್ ಅವರ ಮನೆಗೆ ಬಂದು ಹಲ್ಲೆ ನಡೆಸಿದ್ದಾನೆ. ವಾಕತ್ತಿಯಿಂದ ಕಡಿದು ಕಣ್ಣನ್‌ಗೆ ಗಾಯಗೊಳಿಸಿದ್ದಾನೆ.

ಪರಿಸರವಾಸಿಗಳು ಸ್ಥಳಕ್ಕೆ ತಲುಪುತ್ತಿದ್ದಂತೆ ದಿನೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ವೆಳ್ಳರಿಕ್ಕುಂಡ್ ಪೊಲೀಸರು ನಡೆಸಿದ ತನಿಖೆಯಲ್ಲಿ ಬಾನಂ ಚೆನ್ನಕ್ಕೋಡ್‌ನಲ್ಲಿ ಯುವಕನನ್ನು ಬಂಧಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು