ಕಾಞಂಗಾಡ್: ಮನೆಯೊಳಗೆ ಆಸಿಡ್ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಮಧ್ಯವಯಸ್ಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಾಜಪುರಂ ಕೊಚ್ಚಿಚಾಲ್ ಪುನಂಬಂ ತಡತ್ತಿಲ್ ಮನೆಯ ಜೋಸೆಫ್ ವಿ.ವಿ. (54 - ಜಾಯ್) ಮೃತಪಟ್ಟವರು. ಕಳೆದ ದಿನ ರಾತ್ರಿ 9:20 ರ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯೊಳಗೆ ಪ್ರಜ್ಞಾಹೀನ ಸ್ಥತಿಯಲ್ಲಿ ಪತ್ತೆಯಾದ ಇವರನ್ನು ಕೂಡಲೇ ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ರಾತ್ರಿ 11 ಗಂಟೆಯ ಸುಮಾರಿಗೆ ಮರಣ ಸಂಭವಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಿಕರ ದೂರಿನ ಮೇರೆಗೆ ರಾಜಪುರಂ ಪೊಲೀಸರು ಹೇಳಿಕೆ ಪಡೆದು ತನಿಖೆ ಆರಂಭಿಸಿದ್ದಾರೆ.
Tags
ಕಾಞಂಗಾಡ್
