ಸೀತಾಂಗೋಳಿ: ಆರು ತಿಂಗಳ ಹಿಂದೆ ಏಕ ಪುತ್ರ ನಿಧನರಾದ ಬೆನ್ನಿಗೆಯೇ ತಾಯಿಯೂ ನಿಧನರಾದ ಘಟನೆ ನಡೆದಿದೆ. ಕಿಳಿಂಗಾರು ಸಾಯಿ ಮಂದಿರ ಬಳಿಯ ಮುಂಡಾಂತ್ತಡ್ಜ ದಿವಂಗತ ರಾಮಚಂದ್ರರ ಪತ್ನಿ ಸುಮತಿ(75) ನಿಧನರಾದರು. ನಿನ್ನೆ (ಆದಿತ್ಯವಾರ) ಮದ್ಯಾಹ್ನ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿರುವ ವೇಳೆ ಅಸೌಖ್ಯ ಕಾಣಿಸಿಕೊಂಡಿದ್ದು ಕೂಡಲೇ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ
ಆರು ತಿಂಗಳ ಹಿಂದೆಯಷ್ಟೆ ಇವರ ಪುತ್ರ ಲೋಕೇಶ್ ನಿಧನರಾಗಿದ್ದರು.ಮೃತರು ಸೊಸೆ ಸ್ಮಿತ, ಸಹೋದರಿಯೆಅದ ಜಾನಕಿ, ಗಿರಿಜ ಎಂಬಿವರನ್ನು ಅಗಲಿದ್ದಾರೆ. ಇವರ ಸಹೋದರರಾದ ಸೀನಪ್ಪ, ಶಂಕರ ಎಂಬಿವರು ಈ ಹಿಂದೆಯೇ ನಿಧನರಾಗಿದ್ದರು.
Tags
ಸೀತಾಂಗೋಳಿ
