ಕಾಸರಗೋಡು: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ನಿಧನರಾಗಿದ್ದಾರೆ. ಚಿತ್ತಾರಿಕಲ್ ತವಳಕುಂಡುವಿನ ಎ.ಪಿ. ಸಂತೋಷ್ ಕುಮಾರ್ (48) ಮೃತಪಟ್ಟವರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ (ಮಂಗಳವಾರ) ರಾತ್ರಿ ಅವರು ಕೊನೆಯುಸಿರೆಳೆದಿದ್ದು, ಅಂತ್ಯಕ್ರಿಯೆಯು ಇಂದು ನಡೆಯಿತು.
ಇವರು ದಿವಂಗತ ಕೊಳಂಗಡ ಕುಂಞಿರಾಮನ್ ನಾಯರ್ ಮತ್ತು ಕಾರ್ತ್ಯಾಯನಿ ದಂಪತಿಯ ಪುತ್ರ. ಪತ್ನಿ: ಸಿಂಧು; ಮಕ್ಕಳಾದ ಸರಯು, ಸತ್ಯಜಿತ್; ಸಹೋದರ-ಸಹೋದರಿಯರು: ಎ.ಪಿ. ಬಾಬು, ಎ.ಪಿ. ವಿನೋದ್ (ಪತ್ರಕರ್ತ), ಪ್ರೀತಿ (ಆಶಾ ಕಾರ್ಯಕರ್ತೆ, ಚಿತ್ತಾರಿಕಲ್) ಎಂಬಿವರನ್ನು ಅಗಲಿದ್ದಾರೆ.
Tags
ಕಾಞಂಗಾಡ್
