ಕೋಳಿ ಫಾರ್ಮ್ ನಲ್ಲಿ ವಿದ್ಯುತ್ ಶಾಕ್ ತಗುಲಿ ಸಹೋದರರಿಬ್ಬರು‌ ಮೃತ್ಯು



 ಮಲಪ್ಪುರಂ ಜಿಲ್ಲೆಯ ವೆಟ್ಟತ್ತೂರು ವಲಯದಲ್ಲಿ ಕೋಳಿ ಫಾರ್ಮ್ ಒಂದರಲ್ಲಿ ಸಂಭವಿಸಿದ ವಿದ್ಯುತ್ ಆಘಾತದಿಂದ ಇಬ್ಬರು ಸಹೋದರರು ದಾರುಣವಾಗಿ ಮೃತಪಟ್ಟಿದ್ದಾರೆ. ವೆಟ್ಟತ್ತೂರು ಎಳುತ್ತಲ ನಿವಾಸಿ ಪಟ್ಟಿಕುತ್ತನ್ ಹಂಸ ಅವರ ಮಕ್ಕಳಾದ ಫಾಸಿಲ್ ಮತ್ತು ಸಾಹಿರ್ ಎಂಬುವವರೇ ದುರ್ಘಟನೆಗೆ ಬಲಿಯಾದವರು.

ಕೀಳತ್ತೂರು ನಿರನ್ನಪರಂಬು ಎಂಬಲ್ಲಿರುವ ಕೋಳಿ ಫಾರ್ಮ್‌ನಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ವಿದ್ಯುತ್ ಆಘಾತಕ್ಕೊಳಗಾದಿಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು