ಕುಂಬಳೆ: ಕೆಂಪು ಕಲ್ಲು ಕಟ್ಟುವ ಮೇಸ್ತ್ರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.. ಕುಂಬಳೆ ಬಳಿಯ ಧರ್ಬಾರ್‌ಕಟ್ಟ ನಿವಾಸಿ ಪ್ರಕಾಶ್ (38) ಮೃತಪಟ್ಟವರು. ಬೆಳಗ್ಗೆ ಎದ್ದು ಕುಟುಂಬ ಸದಸ್ಯರ ಜತೆ ಮಾತಾಡಿದ ಬಳಿಕ ಪುನಃ ಮಲಗಿದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ಅವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಮೃತರು ಪತ್ನಿ ಭಾರತಿ, ಪುತ್ರ ಸನ್ವಿತ್,
ಸಹೋದರರ ಸಹೋದರಿಯರಾದ ಬಾಬು, ಸರೋಜಿನಿ, ಸದಾನಂದ ಎಂಬಿವರನ್ನು ಅಗಲಿದ್ದಾರೆ.
Tags
ಕುಂಬಳೆ
