ಕಾಸರಗೋಡು: ಬದಿಯಡ್ಕ ಪೇಟೆಯ ಸರ್ಕಲ್ ಬಳಿ ರವಿಕಿರಣ್ ಫುಟ್ ವೇರ್ ಅಂಗಡಿ ಮಾಲಕ ಕೆಡೆಂಜಿ ನಿವಾಸಿ ಮೋಹನ ನಾಯಕ್ (65) ನಿಧನರಾದರು.
ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಲವು ವರ್ಷಗಳಿಂದ ಮೋಹನ್‌ನಾಯಕ್ ಚಪ್ಪಲಿ ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ ಪುಷ್ಪಾ.ಮಕ್ಕಳಾದ ರವಿಕಿರಣ್, ಅಕ್ಷಯ.ಅಳಿಯ ರತೀಶ್. ಸಹೋದರ ಗಂಗಾಧರ ನಾಯಕ್ ಎಂಬಿವರನ್ನು ಅಗಲಿದ್ದಾರೆ
Tags
ಬದಿಯಡ್ಕ
