ಅಡೂರು: ಅಡಿಕೆ ಹೆಕ್ಕಲು ತೋಟಕ್ಕೆ ತೆರಳಿದ್ದ ಮನೆಯೊಡತಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು, ಮಲ್ಲಂಪಾರ, ತಿಮ್ಮನಂಕುಂಡಿನಲ್ಲಿರುವ ದಿವಂಗತ ಚೋಮಣ್ಣ ನಾಯ್ಕ್ ಅವರ ಪತ್ನಿ ಗುಲಾಬಿ ಬಾಯಿ (68) ನಾಪತ್ತೆಯಾಗಿದ್ದಾರೆ.
ನಿನ್ನೆ (ಬುಧವಾರ) ಸಂಜೆ ಸುಮಾರು 4.30ರ ವೇಳೆಗೆ ಗುಲಾಬಿ ಬಾಯಿ ತೋಟಕ್ಕೆ ತೆರಳಿದ್ದರು. ಬಹಳ ಸಮಯ ಕಳೆದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಮಗ ಜನಾರ್ದನನ್ ಅವರನ್ನು ಹುಡುಕಿಕೊಂಡು ತೋಟಕ್ಕೆ ತೆರಳಿದರು. ಈ ವೇಳೆ ಗುಲಾಬಿ ಬಾಯಿಯ ಚಪ್ಪಲಿ ತೋಟದ ಸಮೀಪದ ತೋಡಿನ ದಡದಲ್ಲಿ ಪತ್ತೆಯಾಗಿದೆ.
ಮಾಹಿತಿ ತಿಳಿದ ಬಳಿಕ ಆದೂರು ಪೊಲೀಸರು ಹಾಗೂ ಕುಟ್ಟಿಕೋಲ್ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ. ಇಂದು (ಗುರುವಾರ) ಬೆಳಗ್ಗೆ ಸ್ಕೂಬಾ ತಂಡದ ನೇತೃತ್ವದಲ್ಲಿ ಶೋಧ ಕಾರ್ಯವನ್ನು ಪುನರಾರಂಭಿಸಲಾಗಿದೆ.
Tags
ಅಡೂರು
