ಬದಿಯಡ್ಕ: ಬಾಂಜತ್ತಡ್ಕ ನಿವಾಸಿ ಸಂಜೀವ (57) ನಿಧನರಾದರು. ಅಸೌಖ್ಯ ನಿಮಿತ್ತ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು. ನಾಲ್ಕು ದಿನಗಳ ಹಿಂದೆ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದು ಕೂಡಲೇ ಅವರನ್ನು ಕಾಸರಗೋಡು ಆಸ್ಪತ್ರೆಗೂ ಅನಂತರ ಪೆರಿಯಾರಂ ಮೆಡಿಕಲ್ ಕಾಲೇಜಿಗೂ ಕೊಂಡೊಯ್ಯಲಾಗಿತ್ತು.
ಮೃತರು ಪತ್ನಿ ಸರೋಜಿನಿ, ಮಕ್ಕಳಾದ ಓಂಪ್ರಕಾಶ್, ಐತಿಕೇಶ್, ಮಂಗಳ ದೇವಿ, ಭಾಗ್ಯಶ್ರೀ, ಸಹೋದರ ಸಹೋದರಿಯರಾದ ಸುಶೀಲ, ರಾಜೀವಿ, ಸರಸ್ವತಿ, ಕಮಲಾಕ್ಷ ಎಂಬಿವರನ್ನು ಅಗಲಿದ್ದಾರೆ.
Tags
ಬದಿಯಡ್ಕ
