ಬಿಜೆಪಿ ಕರ್ಷಕ ಮೋರ್ಚಾ ವತಿಯಿಂದ ಕೃಷಿಕರ ದಿನಾಚರಣೆ


ಬದಿಯಡ್ಕ: ಭಾರತೀಯ ಜನತಾ ಕರ್ಷಕ ಮೋರ್ಚಾ ಬದಿಯಡ್ಕ ಮಂಡಲ ಸಮಿತಿಯ ವತಿಯಿಂದ ಸಿಂಹ ಮಾಸ ೧ರಂದು ಕೃಷಿಕರ ದಿನಾಚರಣೆಯನ್ನು ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ಕಚೇರಿಯಲ್ಲಿ ಆಚರಿಸಲಾಯಿತು. ಕರ್ಷಕ ಮೋರ್ಚಾ ಜಿಲ್ಲಾ ಅಧ್ಯಕ್ಷ ಸುಕುಮಾರನ್ ಕಾಲಿಕ್ಕಡವು ಉದ್ಘಾಟಿಸಿ ಮಾತನಾಡುತ್ತಾ ನಾಡಿಗೆ ಅನ್ನ ನೀಡುವ ರೈತನೇ ಸಮಾಜದ ನಿಜವಾದ ಶಕ್ತಿ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ರೈತರ ಆರ್ಥಿಕ ಭದ್ರತೆ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆಗೆ ಸೂಕ್ತ ಬೆಂಬಲ ಸಿಗಬೇಕಾಗಿದೆ. ಕೇಂದ್ರ ಸರ್ಕಾರವು ಕೃಷಿಕರ ಏಳಿಗೆಗಾಗಿ ಜಾರಿಗೆ ತಂದಿರುವ ವಿವಿಧ ಸಬ್ಸಿಡಿಗಳು, ಭದ್ರತಾ ಯೋಜನೆಗಳು ಹಾಗೂ ತಂತ್ರಜ್ಞಾನಾಧಾರಿತ ನೆರವು ಪ್ರತಿಯೊಬ್ಬ ಕೃಷಿಕನಿಗೂ ತಲುಪುವಂತಾಗಬೇಕು ಎಂದು ಹೇಳಿದರು. ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕರ್ಷಕ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರುಗಳಾದ ಚಂದ್ರಭಾನು ನಾಯರ್, ಪ್ರಭಾಕರನ್ ಎಂ.ಕೆ., ಬಿಜೆಪಿ ಬದಿಯಡ್ಕ ಪಂಚಾಯತು ಸಮಿತಿ ಅಧ್ಯಕ್ಷ ಉದನೇಶ್ವರ ಬಿ. ಶುಭಾಶಂಸನೆಗೈದರು. ಸದಸ್ಯ ಶ್ಯಾಮ ಆಳ್ವ ಕಡಾರು ಸ್ವಾಗತಿಸಿ, ಮಂಡಲ ಉಪಾಧ್ಯಕ್ಷ ರಾಧಾಕೃಷ್ಣ ಕೆದಿಲಾಯ ವಂದಿಸಿದರು. ಸಾಧಕ ಕೃಷಿಕರಾದ ವೆಂಕಟನಾಥ ಸ್ವಾಮಿ ಬಾಜಿರ್‌ತೊಟ್ಟಿ, ನಾರಾಯಣ ತಾರ್ಲೆ, ಹರಿಪ್ರಸಾದ ರೈ ಮುನಿಯೂರು ಇವರನ್ನು ಸನ್ಮಾನಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು