ಹಿರಿಯ ಆರ್.ಎಸ್.ಎಸ್.ಸ್ವಯಂಸೇವಕ ಪುತ್ತಿಗೆ ನಾಗೇಶ್ ಆಚಾರ್ಯ ನಿಧನ


 ಪುತ್ತಿಗೆ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಬಡಗಿ ಕೆಲಸ ನಿರ್ವಹಿಸುತ್ತಿದ್ದ ಪುತ್ತಿಗೆ ನಾಗೇಶ್ ಆಚಾರ್ಯ (65) ನಿಧನರಾದರು. ಕೆಲಸದ ಸಮಯದಲ್ಲಿ ತಲೆ ತಿರುಗಿ ಬಿದ್ದ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.   ಅನೇಕ ವರ್ಷಗಳ ಕಾಲ ಆರ್ ಎಸ್ ಎಸ್ ನ ಪುತ್ತಿಗೆ ಶಾಖಾ ಮುಖ್ಯ ಶಿಕ್ಷಕರಾಗಿದ್ದ ಅವರು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರು.ಇವರ ಒರ್ವ ಪುತ್ರ ಪ್ರವೀಣ ಎಂಡೋಸಲ್ಫನ್ ಸಂತ್ರಸ್ತನಾಗಿದ್ದು ಈ ಹಿಂದೆಯೇ ತೀರಿಕೊಂಡಿದ್ದರು.ಇನ್ನೊರ್ವ ಪುತ್ರ ರಾಜೇಶ್ ಕಳೆದ ದೀಪಾವಳಿ ಸಂದರ್ಭ ಮನೆಯಲ್ಲಿ ದೀಪಾಲಂಕಾರದ ಕರೆಂಟ್ ಲೈಟ್ ಅಳವಡಿಸುವ ನಡುವೆ ಶಾಕ್ ಗೆ ಒಳಗಾಗಿ ಮೃತಪಟ್ಟಿದ್ದರು. ಇದೀಗ ಮೃತರು ಪತ್ನಿ ಹೇಮಲತಾ, ಪುತ್ರ ಕಿರಣ್ ಕುಮಾರ್, ಸೊಸೆ ಪವಿತ್ರ,ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



#news #viral #blogger #viralnews #dailypost

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು