ಮಂಜೇಶ್ವರದಲ್ಲಿ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ಮಾರಾಟ; ಸ್ಕೂಟರ್ ಸಹಿತ ಓರ್ವನ ಸೆರೆ



ಮಂಜೇಶ್ವರ: ಮಂಜೇಶ್ವರ ಮಾರ್ಕೆಟ್ ಜಂಕ್ಷನ್‌ನಲ್ಲಿ ಕರ್ನಾಟಕ ಮದ್ಯ ಮಾರಾಟ ಮಾಡಲು ಸ್ಕೂಟರ್‌ನಲ್ಲಿ ಬಂದ ಯುವಕನನ್ನು ಎಕ್ಸೈಸ್  ಅಧಿಕಾರಿಗಳು ಬಂಧಿಸಿದ್ದಾರೆ. ಮಂಜೇಶ್ವರ ಗುಡಕೇರಿ ನಿವಾಸಿ ನಿತಿನ್ (30) ಬಂಧಿತ ಆರೋಪಿ. ಓಣಂ ವಿಶೇಷ ಡ್ರೈವ್‌ನ ಭಾಗವಾಗಿ ನಿನ್ನೆ (ಶುಕ್ರವಾರ) ಕುಂಬಳೆ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಗ್ರೇಡ್ ಎ.ಬಿ. ಅಬ್ದುಲ್ಲಾ ಮತ್ತು ತಂಡವು ನಡೆಸಿದ ದಾಳಿಯಲ್ಲಿ ಬಂಧನ ನಡೆದಿದೆ. ಸ್ಕೂಟರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸ್ಕೂಟರ್‌ನಿಂದ 8.64 ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ವಶಪಡಿಸಲಾಗಿದೆ. ಪ್ರಕರಣದ ದಾಖಲೆಗಳು,  ವಾಹನ ಹಾಗೂ ಆರೋಪಿಯನ್ನು ಕುಂಬಳೆ ರೇಂಜ್‌ಗೆ ಹಾಜರುಪಡಿಸಲಾಯಿತು. ಈತ ಮುಂಚೆಯೂ ಅಬಕಾರಿ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಕ್ಸೈಸ್ ಅಧಿಕಾರಿ ಹೈಯರ್ ಗ್ರೇಡ್ ಎ.ಕೆ. ದಿನೂಪ್, ಸಿವಿಲ್ ಎಕ್ಸೈಸ್ ಅಧಿಕಾರಿ ಟಿ. ಕಣ್ಣನ್‌ಕುಂಜಿ, ಸಿವಿಲ್ ಎಕ್ಸೈಸ್ ಅಧಿಕಾರಿ ಪಿ.ಎ. ಕ್ರಿಸ್ಟಿನ್ ಕೂಡ ದಾಳಿಯಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು