ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಯೋಜನೆ; ಸದಸ್ಯರ ತೆರೆದ ಹೃದಯ ಶಸ್ತ್ರಕ್ರಿಯೆಗೆ ಸಹಾಯ ಹಸ್ತಾಂತರ


 ಬದಿಯಡ್ಕ : ಕ್ಯಾಂಪ್ಕೋದ ಸಾಂತ್ವನ  ಯೋಜನೆಯಡಿ ಕ್ಯಾಂಪ್ಕೋ  ಸದಸ್ಯ ದಿ. ನಾರಾಯಣ ಕೆ. ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ವತಿಯಿಂದ ರೂ. 2 ಲಕ್ಷ ಧನಸಹಾಯವನ್ನು ಅವರ ನಿವಾಸಕ್ಕೆ ತೆರಳಿ ಹಸ್ತಾಂತರಿಸಲಾಯಿತು. ಕ್ಯಾಂಪ್ಕೊ ನಿರ್ದೇಶಕ ಸತ್ಯನಾರಾಯಣ ಪ್ರಸಾದ್,  ಸತೀಶ್ಚಂದ್ರ ಭಂಡಾರಿ, ಹಾಗೂ  ಗಣೇಶ್ ಕುಮಾರ್ ಎ. ಪಾರಕಟ್ಟೆ  ಅವರು ದಿ, ನಾರಾಯಣ ಕೆ. ಅವರ ಪತ್ನಿ ಉಷಾ ನಾರಾಯಣನ್ ಅವರಿಗೆ ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ಬದಿಯಡ್ಕ ರೀಜನ್ ಚೀಫ್ ಮ್ಯಾನೇಜರ್ ಚಂದ್ರ ಎಂ., ಕ್ಯಾಂಪ್ಕೋ ಮುಳಿಯಾರು ಶಾಖಾ ವ್ಯವಸ್ಥಾಪಕರು ಹಾಗೂ ಕಾಸರಗೋಡು ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಸದಸ್ಯರ ಕುಟುಂಬದವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು