ಕಟ್ಟಡ‌ ನಿರ್ಮಾಣ ಕಾರ್ಮಿಕ ಕ್ಲಿನಿಕ್ ನಲ್ಲಿ ಕುಸಿದು ಬಿದ್ದು ಮೃತ್ಯು

       



ಅಡೂರು : ಕಟ್ಟಡ ನಿರ್ಮಾಣ ಕಾರ್ಮಿಕರೋರ್ವರು ಎದೆನೋವು ಕಾಣಿಸಿಕೊಂಡು ಖಾಸಗಿ ಕ್ಲಿನಿಕ್‌ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಡೂರು ಮಂಡೆಬೆಟ್ಟುವಿನ ಬಾಲಕೃಷ್ಣನ್ (48) ಮೃತಪಟ್ಟವರು.

ನಿನ್ನೆ ಮಧ್ಯಾಹ್ನ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಅಡೂರಿನ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಏಕಾಏಕಿ ಕುಸಿದು ಬಿದ್ದ ಅವರನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಮುಳ್ಳೇರಿಯ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ಮೃತರು ದಿ. ಗೋಪಾಲನ್ ಮತ್ತು ಮಾಧವಿಯವರ ಪುತ್ರ. ಪತ್ನಿ ಸುಜಾತ. ಮಕ್ಕಳಾದ ಶಿಬಿನ್ ಹಾಗೂ ಅನನ್ಯ. ಸಹೋದರರಾದ ಲಕ್ಷ್ಮಿ ಮತ್ತು ಶ್ರೀಧರ ಎಂಬಿವರನ್ನು ಅಗಲಿದ್ದಾರೆ. ಆದೂರು ಪೊಲೀಸರು ಸಹೋದರ ಶ್ರೀಧರ ನೀಡಿದ ದೂರಿನ ಆಧಾರದ ಮೇಲೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು