ಮಂಜೇಶ್ವರ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯನ್ನು ಮಂಜೇಶ್ವರ ಹೊಸಬೆಟ್ಟು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣ ಶಿವ ಕೃಪ ರವರು ಗುರುಗಳ ದಿವ್ಯ ಸಂದೇಶಗಳನ್ನು ವಿವರಿಸಿದರು. ಸಭೆಯಲ್ಲಿ ಬಿಲ್ಲವ ಮುಖಂಡರಾದ ಕೃಷ್ಣಪ್ಪ ಪೂಜಾರಿ ಬಡಾಜೆ, ರವೀಂದ್ರ ಪೂಜಾರಿ ಕಡಂಬಾರು ಭಂಡಾರ ಮನೆ, ರವಿ ಮುಡಿಮಾರು, ಹಾಗೂ ಮಹಿಳಾ ಸಮಿತಿಯವರು ಉಪಸ್ಥಿತರಿದ್ದರು. ಗುರು ಪೂಜೆಯನ್ನು ಶಾಂತರಾಮ ಪೂಜಾರಿ ಹೊಸಬೆಟ್ಟು ಇವರು ನಿರ್ವಹಿಸಿದರು.
Tags
ಮಂಜೇಶ್ವರ
