ಮೆಂಬರ್ ಕೇರ್ ಯೋಜನೆಯಲ್ಲಿ ಕುತ್ತಿಕೋಲ್ ವೀಟ್ಟಿಯಾಡಿ 9ನೇ ವಾರ್ಡ್; ಓಣಂ ಹಬ್ಬದ ಅಂಗವಾಗಿ ಹಿರಿಯ ನಾಗರಿಕರಿಗೆ ಓಣಂ ಕೋಡಿ ವಿತರಣೆ
byGADINAADU-
0
ಬಂದಡ್ಕ: ಮೆಂಬರ್ ಕೇರ್ ಯೋಜನೆಯೊಂದಿಗೆ ಕುತ್ತಿಕೋಲ್ ವೀಟ್ಟಿಯಾಡಿ 9ನೇ ವಾರ್ಡ್ ಆಶ್ರಯದಲ್ಲಿ ಓಣಂ ಹಬ್ಬದ ಅಂಗವಾಗಿ ಹಿರಿಯ ನಾಗರಿಕರಿಗೆ ಓಣಕ್ಕೋಡಿ ವಿತರಿಸಲಾಯಿತು.
ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಶಾರೀರಿಕ ಅಶಕ್ತತೆ ಎದುರಿಸುತ್ತಿರುವ ಸುಮಾರು 25 ಜನರಿಗೆ ಓಣಕ್ಕೋಡಿ ನೀಡಲಾಯಿತು. ವಾರ್ಡ್ ಮೆಂಬರ್ ಮಹೇಶ್ ಗೋಪಾಲ್ ನೇತೃತ್ವ ವಹಿಸಿದ್ದು, ಲೋಹಿತಾಕ್ಷನ್ ಮಲಾಮಕುಂಡ್, ವಿನೋದ್ ಕಾಟೂರ್, ಚಿನ್ಮಯಾನಂದ್, ಸುಮಿತ್ ರಾಮನ್ ಮುಂತಾದವರು ಉಪಸ್ಥಿತರಿದ್ದರು