ಓಣಂ ಆಚರಣೆಯ ನಡುವೆ ಆವರಣವಿಲ್ಲದ ಬಾವಿಗೆ ಬಿದ್ದು ಗಾಯಗೊಂಡ 10 ನೇ ತರಗತಿ ವಿದ್ಯಾರ್ಥಿ ಕಣ್ಣೂರು ಆಸ್ಪತ್ರೆಯಲ್ಲಿ ಮೃತ್ಯು


 
ಕಾಞಂಗಾಡು:  ಓಣಂ ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದ ನಡುವೆ ಆವರಣವಿಲ್ಲದ ಬಾವಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ 10 ನೇ ತರಗತಿ ವಿದ್ಯಾರ್ಥಿ ಕಣ್ಣೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಚಿಮೇನಿ ಆನಿಕ್ಕಾಡಿ ನಿವಾಸಿ ಧನೇಶ್-ಸವಿತಾ ದಂಪತಿಯ ಪುತ್ರ ಸನೂಪ್(15) ಮೃತಪಟ್ಟ ವಿದ್ಯಾರ್ಥಿ. ನಿನ್ನೆ (ಗುರುವಾರ) ರಾತ್ರಿ ಚಿಮೇನಿ ಚೆಂಬ್ರಕಾನ ಎಂಬಲ್ಲಿ ಈ ಘಟನೆ ನಡೆದಿದೆ.  ಓಣಂ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮವನ್ನು ವೀಕ್ಷಿಸಲು ಸನೂಪ್ ಹಾಗೂ ಗೆಳೆಯರು ಬಂದಿದ್ದರು.

  ಕಾರ್ಯಕ್ರಮದ ನಡುವೆ ಸನೂಪ್ ಹಾಗೂ ಗೆಳೆಯರು ಮೂತ್ರ ಶಂಕೆಗೆಂದು ತೆರಳಿದ್ದು ಈ ವೇಳೆ ಸನೂಪ್ ಆವರಣವಿಲ್ಲದ ಬಾವಿಗೆ ಬಿದ್ದನೆನ್ನಲಾಗಿದೆ. ಜತೆಗಿದ್ದ ಗೆಳೆಯರು ಬೊಬ್ಬೆ ಹಾಕಿದಾಗ ಸೇರಿದ ಜನರು ಓಡಿ ಬಂದು ಸನೂಪ್ ನನ್ನು ಮೇಲಕೆತ್ತಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ಥಳೀಯರು ನೀಡಿದ ಮಾಹಿತಿಯಂತೆ ಚಿಮೇನಿ ಅಗ್ನಿಶಾಮಕ ದಳ ಸಿಬಂದಿಗಳು ಆಗಮಿಸಿ ಸನೂಪ್ ನನ್ನು ಮೇಲಕೆತ್ತಿ ಕಣ್ಣೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
      ಆದರೆ ಚಿಕಿತ್ಸೆಗೆ ಸ್ಪಂದಿಸದ ಸನೂಪ್ ಇಂದು ಸಾಯಂಕಾಲ ಕೊನೆಯುಸಿರೆಳೆದನು. ಮೃತನು ತಂದೆ, ತಾಯಿ, ಸಹೋದರಿ ಸನುಷ ಎಂಬಿವರನ್ನು ಅಗಲಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು