ಕಾಞಂಗಾಡು: ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಮನೆಯ ಮೇಲೆ ಮಗುಚಿ ಬಿದ್ದು ಲಾರಿ ಚಾಲಕ ಮೃತಪಟ್ಟ ಘಟನೆ ನಡೆದಿದೆ.. ಚಾಯ್ಯೋಮ್ ನಿವಾಸಿ ಸಾದಿಕ್ (40) ಮೃತಪಟ್ಟವರು. ಇಂದು (ಶನಿವಾರ) ಬೆಳಿಗ್ಗೆ ಏಳೂವರೆ ಸುಮಾರಿಗೆ ಕಾಂಜಿರಪ್ಪೊಯಿಲ್ ಕುಳಂಗಾಟ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಕೆಂಪು ಕಲ್ಲನ್ನು ಇಳಿಸಿದ ಬಳಿಕ ಲಾರಿಯನ್ನು ಹಿಂದೆ ತೆಗೆಯುವಾಗ ರಸ್ತೆಯ ಅಂಚು ಕುಸಿದು ನಿಯಂತ್ರಣ ತಪ್ಪಿದೆ. ತಗ್ಗು ಪ್ರದೇಶದಲ್ಲಿದ್ದ ಪಿ. ಗೋಪಾಲನ್ ಎಂಬುವವರ ಮನೆಯ ಮೇಲೆ ಲಾರಿ ಬಿದ್ದಿದ್ದು, ಇದರಿಂದ ಮನೆಯ ಅಡುಗೆ ಕೋಣೆಯು ಸಂಪೂರ್ಣವಾಗಿ ಜಖಂಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಾದಿಕ್ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
Tags
ಕಾಞಂಗಾಡ್
