ಮಾನ್ಯ ಶ್ರೀ ಮಹಾದೇವ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆಯ ನಿವೃತ್ತಿ ರಾಶಿ ಚಿಂತನೆ ಆರಂಭ: ಮಧ್ಯಾಹ್ನ ಬಳಿಕ ನಿಧಿ ಸಂಚಯನ ಕಾರ್ಯಕ್ರಮ


 ಮಾನ್ಯ ಶ್ರೀ ಮಹಾದೇವ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆಯ ನಿವೃತ್ತಿ ರಾಶಿ ಚಿಂತನೆ ಕಾರ್ಯ ಇಂದು ಬೆಳಗ್ಗೆ ದೈವಜ್ಞರಾದ ಕೊಳಚೆಪ್ಪು ಮಹಾಲಿಂಗೇಶ್ವರ ಶರ್ಮ ಅವರ ನೇತೃತ್ವದಲ್ಲಿ ಆರಂಭಗೊಂಡಿದೆ. ಊರ-ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.



ಮಧ್ಯಾಹ್ನ ಬಳಿಕ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನಿರ್ದೇಶಾನುಸಾರ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತಮ್ಮ ದಿವ್ಯಹಸ್ತದಿಂದ ಶ್ರೀ ಮಹಾದೇವ ದೇವಸ್ಥಾನದ ಪುನರ್‌ನಿರ್ಮಾಣದ ಪ್ರಥಮ ಹೆಜ್ಜೆಯಾಗಿ ‘ನಿಧಿ ಸಂಚಯನ’ಕ್ಕೆ ಚಾಲನೆ ನೀಡಲಿರುವರು.
ಬಳಿಕ ಕ್ಷೇತ್ರ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಗಳ ರೂಪುರೇಷೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು