ನೀರು ಸೇದುವ ವೇಳೆ ಕಾಲು ಜಾರಿ ಬಾವಿಗೆ ಜಾರಿ ಬಿದ್ದು ವ್ಯಕ್ತಿ ಮೃತ್ಯು


 ಕಾಸರಗೋಡು: ನೀರು ಸೇದುವ ವೇಳೆ ಆಯ ತಪ್ಪಿ ಬಾವಿಗೆ ಜಾರಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.ಪೆರಿಯ ವಡಕ್ಕೇಕರೆಯ ನಡುವಿಲ್ ವೀಡ್ ನಿವಾಸಿ, ಬಿಜೆಪಿ ಪರಿಯ  ವಲಯ  ಸಮಿತಿ ಅಧ್ಯಕ್ಷ ಪುರುಷೋತ್ತಮನ್  (64) ಮೃತಪಟ್ಟವರು.ಇಂದು (ಶುಕ್ರವಾರ) ಬೆಳಿಗ್ಗೆ ಈ ಘಟನೆ ನಡೆದಿದೆ. 

       ಮನೆಯ ಸಮೀಪವಿರುವ ತರವಾಡು ಮನೆಗೆ ನೀರು ಸೇದುವುದಕ್ಕಾಗಿ ಅವರು ಹೋಗಿದ್ದರು. ಒಂದು ಬಕೆಟು ನೀರನ್ನು ಮನೆಗೆ ತಂದು ತಲುಪಿಸಿದ ಬಳಿಕ, ಅವರು ಮತ್ತೆ ಹೋಗಿದ್ದರು. ನಂತರ ಅವರು ವಾಪಸ್ ಬಾರದೇ ಇದ್ದುದರಿಂದ ಹುಡುಕಾಡಿದಾಗ, ಹಗ್ಗ ಹಾಗೂ ಬಕೆಟು ಬಾವಿಯೊಳಗೆ ಇಳಿಸಿರುವುದು ಕಂಡುಬಂದಿದೆ. ಸಂಶಯಗೊಂಡು ಅಗ್ನಿಶಾಮಕ ದಳಕ್ಕೆ (ಫೈರ್‌ಫೋರ್ಸ್) ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಪರಿಶೀಲನೆ ನಡೆಸಿ ಮೃತದೇಹವನ್ನು ಹೊರತೆಗೆದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾಯಿಸಿದರು.

ಪ್ಯಾರಲಲ್ ಕಾಲೇಜು ಉಪನ್ಯಾಸಕರಾಗಿದ್ದ ಪುರುಷೋತ್ತಮನ್ ಅವರು ಸಕ್ರಿಯ ಆರ್.ಎಸ್.ಎಸ್ ಕಾರ್ಯಕರ್ತ, ಉತ್ತಮ ಕೃಷಿಕ ಹಾಗೂ ಸಂಘಟಕರಾಗಿದ್ದರು. ಪುರುಷೋತ್ತಮನ್ ಅವರ ಅಕಾಲಿಕ ಮರಣವು ಪೆರಿಯಾವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೃತರು ಪತ್ನಿ ಶೋಭಾ, ಮಕ್ಕಳಾದ ಸಚಿನ್ ಕೃಷ್ಣ, ಶ್ವೇತಾ. ಎಂಬಿವರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು