ಪಾಲಕಾಡಿನ ಆರ್‍ಎಸ್‍ಎಸ್ ಕಾರ್ಯಕರ್ತ ಶ್ರೀನಿವಾಸನ್ ಕೊಲೆ ಪ್ರಕರಣದ ಆರೋಪಿ, ನಿಷೇಧಿತ ಪೋಪುಲರ್ ಫ್ರಂಟ್ ನೇತಾರ ಯಾಸರ್ ಅರಾಫತ್ ನಿಧನ


ಪಾಲಕಾಡಿನ ಆರ್‍ಎಸ್‍ಎಸ್ ಕಾರ್ಯಕರ್ತ ಶ್ರೀನಿವಾಸನ್ ಕೊಲೆ ಪ್ರಕರಣದ ಆರೋಪಿ, ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್‌ನ (ಪಿಎಫ್‌ಐ) ನಾಯಕನೂ ಆದ ಯಾಸರ್ ಅರಾಫತ್ ನಿಧನರಾಗಿದ್ದಾನೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಾ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದನು.

​           ಕೊಚ್ಚಿಯ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಂಗ ಬಂಧನದಲ್ಲಿ ವಿಯ್ಯೂರು ಅತೀ ಸುರಕ್ಷಿತ ಕಾರಾಗೃಹದಲ್ಲಿದ್ದಾಗ ಆತನಿಗೆ ಹೃದಯ ಸಂಬಂಧ ಖಾಯಿಲೆ ಕಾಣಿಸಿಕೊಂಡಿತ್ತು. ಆತನನ್ನು  ತ್ರಿಶೂರ್ ವೈದ್ಯಕೀಯ ಕಾಲೇಜಿಗೂ ಅನಂತರ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೂ ಕೊಂಡೊಯ್ಯಲಾಯಿತು. ಅಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ನಂತರ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವಾಗ ಮರಣ ಸಂಭವಿಸಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

​          ಶ್ರೀನಿವಾಸನ್ ಕೊಲೆ ಪ್ರಕರಣದ ಪಿತೂರಿಗೆ ಸಂಬಂಧಿಸಿದಂತೆ ಎನ್‌ಐಎ ಯಾಸರ್ ಅರಾಫತ್ ಅವರನ್ನು ಬಂಧಿಸಿತ್ತು. ಈ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪುತ್ತಿರುವ ಎರಡನೇ ವ್ಯಕ್ತಿ ಈತನಾಗಿದ್ದಾನೆ. ಇದಕ್ಕೂ ಮೊದಲು, ಪ್ರಕರಣದ ಆರೋಪಿಯಾಗಿದ್ದ ನಿಸಾರ್  ಎಂಬಾತ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಕ್ಯಾನ್ಸರ್ ರೋಗ ಉಲ್ಬಣಗೊಂಡು ನಿಧನರಾಗಿದ್ದನು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು