ಬದಿಯಡ್ಕ: ಕೂಲಿ ಕಾರ್ಮಿಕನಾದ ವ್ಯಕ್ತಿಯ ಮೃತದೇಹ ಮನೆಯ ಸಿಟೌಟಿನಲ್ಲಿ ಪತ್ತೆಯಾಗಿದೆ. ಕಾಡಮನೆ ಬಳಿಯ ಮಾಡತ್ತಡ್ಕ ನಿವಾಸಿ ದಿವಂಗತರಾದ ಗೋವಿಂದ ನಾಯ್ಕ- ಪರಮೇಶ್ವರಿ ದಂಪತಿಯ ಪುತ್ರ ನಾರಾಯಣ ನಾಯ್ಕ (54) ಮೃತಪಟ್ಟವರು. ನಿನ್ನೆ (ಸೋಮವಾರ) ಸಂಜೆ ಮಾಡತ್ತಡ್ಕ ಮನೆಯ ಸಿಟೌಟಿನಲ್ಲಿ ಮೃತದೇಹ ಪತ್ತೆಯಾಗಿದೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು. ಘಟನೆಯ ವೇಳೆ ಇವರ ಪತ್ನಿ ಹಾಗೂ ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ಮೃತರು ಪತ್ನಿ ತಿರುಮಲೇಶ್ವರಿ, ಮಕ್ಕಳಾದ ಮಿಥುನ್ ರಾಜ್, ಹರ್ಷಿತಾ, ಸಹೋದರಿ ಗೌರಿ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವ ಸಹೋದರಿ ಲಕ್ಷ್ಮಿ ಈ ಹಿಂದೆಯೇ ನಿಧನರಾಗಿದ್ದರು.
Tags
ಬದಿಯಡ್ಕ
