ಮಧೂರು ಪಂಚಾಯತ್ ಯುವ ಬಂಟರ ಸಂಘದ ಆಶ್ರಯದಲ್ಲಿ ಆಟಿಡೊಂಜಿ ದಿನ


 ಮಧೂರು :ಮಧೂರು ಪಂಚಾಯತ್ ಯುವ ಬಂಟರ ಸಂಘದ ಆಟಿಡೊಂಜಿ ದಿನ ಪರಕ್ಕಿಲಡ್ ಕಾರ್ಯಕ್ರಮ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. 


ಬಂಟ ಮಹಿಳೆಯರಿಂದ ಭಜನೆಯೊಂದಿಗೆ ಆರಂಭ ಗೊಂಡ ಕಾರ್ಯಕ್ರಮವನ್ನು ಬಂಟರ ಸಂಘದ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಸದಸ್ಯರೂ ಆಗಿರುವ ಕಾಸರಗೋಡಿನ ಹಿರಿಯ ನ್ಯಾಯವಾದಿ ಸದಾನಂದ ರೈ ಉದ್ಘಾಟಿಸಿದರು. 

ಮಧೂರು ಯುವ ಬಂಟರ ಸಂಘದ ಅಧ್ಯಕ್ಷರು ಹಾಗೂ ಮಧೂರು ಪಂಚಾಯತ್ ಸದಸ್ಯರೂ ಆಗಿರುವ ನವನೀತ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಭೆಯಲ್ಲಿ ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಮುಖ್ಯ ಭಾಷಣ ಮಾಡಿದರು ಮಧೂರು ಬಂಟರ ಸಂಘದ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರು ಗುತ್ತು ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಬಂಟರ ಭವನದ ಪ್ರಗತಿಯ ಬಗ್ಗೆ ವಿವರಿಸಿ ಇದರ ಉದ್ಘಾಟನೆಯನ್ನು ಕೆಲವೇ ತಿಂಗಳುಗಳಲ್ಲಿ ನೆರವೇರಿಸಲು ಬಂಟ ಬಾಂಧವರ ಉದಾರ ನೆರವಿನ  ಅಗತ್ಯವಿದೆ ಎಂದು ಹೇಳಿದರು.ಸಮಾರಂಭದಲ್ಲಿಮಧೂರು ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಮತ್ತು ಕಾಸರಗೋಡು ವಲಯ ಸಂಘದ ಕೋಶಾಧಿಕಾರಿ ಅಶೋಕ ರೈ ಮಾಯಿಪ್ಪಾಡಿಗುತ್ತು ಮಧೂರು ಮಹಿಳಾ ಬಂಟರ ಸಂಘದ ಗೌರವಧ್ಯಕ್ಷೆ ಉದಾರ ದಾನಿ ಜನಪ್ರಿಯ ನಾಟಿ ವೈದ್ಯೆ ಡಾ. ಯಮುನಾ ಎಸ್ ಶೆಟ್ಟಿ, ಅಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ ಕಾಸರಗೋಡು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ ಮಧೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ರೈ ನಾಯಕ್ಕೋಡು ಯುವ ಬಂಟರ ಸಂಘದ ಪದಾಧಿಕಾರಿಗಲಾದ ಪ್ರಧಾನ ಕಾರ್ಯದರ್ಶಿ ಸಂತೋಷ್ ರೈ ಗಂಗೆ

 ಶಿವರಾಜ ರೈ ಕಾಲಿoಗಾಡು ಮೊದಲಾದವರು ಉಪಸ್ಥಿತರಿದ್ದರು.ಕರ್ನಾಟಕದ ಹೆಸರಾಂತ ನಿರೂಪಕ ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಬಳಿಕ ವಿವಿಧ ಸ್ಪರ್ಧೆಗಳು, ಆಟಿ ಮಾಸದ ವಿಶೇಷ ತಿಂಡಿ ತಿನಸುಗಳ ಪ್ರದರ್ಶನ, ಬಂಟ ಯುವಕರು ಹೊಸಮನೆ ಇವರಿಂದ ಯಕ್ಷ ಗಾನ ಬಯಲಾಟ, ಸಭಿಕರಿಗೆ ಭೂರಿ ಭೋಜನ ನಡೆಯಿತು. ಕ್ರೀಡಾ ಸ್ಪರ್ಧೆಗಳ ಅಂಗವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಸಹಿತ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು ಅಪರಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಹಲವರಿಂದ ಸಂಗೀತ, ಹೆಣ್ಮಕ್ಕಳಿಂದ ಹಾಗೂ ಬಾಲಕ ಬಾಲಕಿಯರಿಂದ ಆಕರ್ಷಕ ನೃತ್ಯ ಕಾರ್ಯಕ್ರಮಗಳು ನಡೆಯಿತು ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು