ಬದಿಯಡ್ಕ ಕುಟುಂಬಶ್ರೀ ಮೋಡೆಲ್ ಸಿಡಿಎಸ್ ಆಶ್ರಯದಲ್ಲಿ ಓಣಂ ಸಂತೆ ಆರಂಭ, ಗ್ರಾಮ‌ ಪಂಚಾಯತು ಅಧ್ಯಕ್ಷ ಶಂಕರ.ಡಿ.ಉದ್ಘಾಟನೆ


 ಬದಿಯಡ್ಕ: ಬದಿಯಡ್ಕ ಮೋಡೆಲ್ ಸಿಡಿಎಸ್ (ಕುಟುಂಬಶ್ರೀ) ವತಿಯಿಂದ ಓಣಂ ಸಂತೆ ಇಲ್ಲಿನ ವಾರದ ಸಂತೆ ನಡೆಯುವ ಸ್ಥಳದಲ್ಲಿ ಆರಂಭಗೊಂಡಿತು. ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ.ಅವರು ಓಣಂ ಸಂತೆಯನ್ನು ಉದ್ಘಾಟಿಸಿದರು.  ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷರಾದ ಅಶ್ವಿನಿ ಕೆ.ಎಂ, ಬ್ಲಾಕ್ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ  ಎಂ.ಎಸ್.ಮೊಯ್ದು,   ವೆಲ್ಫೇರ್ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್, ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ವಿ ರೈ, ಗ್ರಾಮ ಪಂಚಾಯತು ಸದಸ್ಯರುಗಳಾದ ಹರೀಶ್, ಶ್ಯಾಮಪ್ರಸಾದ್ ಸರಳಿ,  ಅನ್ನತ್ ಬೀವಿ, ಉಷ ಪಳ್ಳತ್ತಡ್ಕ, ಮಧುಸೂಧನ, ಸುಬೈದ, ಶ್ಯಾಮಪ್ರಸಾದ್ ಮಾನ್ಯ, ಗಂಗಾಧರ ಗೋಳಿಯಡ್ಕ ಮೊದಲಾದವರು ಭಾಗವಹಿಸಿದರು. ಸಿಡಿಎಸ್ ಅಧ್ಯಕ್ಷೆ  ಸುಲೋಚನ ಸ್ವಾಗತಿಸಿ ಉಪಾಧ್ಯಕ್ಷೆ ಜಯಂತಿ ವಂದಿಸಿದರು. ಅಗಸ್ಟ್ 18,19,20,21,22,24  ಎಂಬೀ ದಿನಗಳಲ್ಲಿ ಓಣಂ ಸಂತೆ ಇರುವುದು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು