ರೈಲು ಡಿಕ್ಕಿ ಹೊಡೆದು ಒಂದೂವರೆ ವರ್ಷದ ಬಾಲಕ ಮೃತ್ಯು


 ಆಲಪ್ಪುಯ: ಮನೆಯ ಸಮೀಪದ ರೈಲು ಹಳಿಗೆ ತೆರಳಿದ್ದ ಒಂದೂವರೆ ವರ್ಷದ ಬಾಲಕ ರೈಲು ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ಆಲಪ್ಪುಳ ಜಿಲ್ಲೆಯ ಅಂಬಲಪ್ಪುಯದಲ್ಲಿ ಇಂದು (ಮಂಗಳವಾರ) ಸಂಜೆ ನಡೆದಿದೆ.

ಮೃತ ಬಾಲಕನನ್ನು ಕಕ್ಕಾಯಂ ಪುತುವಲ್   ನಿವಾಸಿ ವಿನೀತ್ ಅವರ ಪುತ್ರ ತೃಣವ್ ಎಂದು ಗುರುತಿಸಲಾಗಿದೆ.   ಇಂದು ಸಂಜೆ   6 ಗಂಟೆಯ ವೇಳೆಗೆ ಕೊಲ್ಲಂ ಕಡೆಗೆ ತೆರಳುತ್ತಿದ್ದ MEMU ರೈಲು ಬಾಲಕನಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಮನೆಯ ಸಮೀಪದಲ್ಲಿದ್ದ ರೈಲು ಹಳಿಗೆ ಬಾಲಕ ಹೇಗೆ ತಲುಪಿದನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಅಪಘಾತದ ಬಳಿಕ ಬಾಲಕನ ಮೃತದೇಹವನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು