ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು ಕುಟುಂಬಶ್ರೀ ಮಾದರಿ ಸಿಡಿಎಸ್‌ನ ನೇತೃತ್ವದಲ್ಲಿ ಸಿಡಿಎಸ್ ಹಾಲ್‌ನಲ್ಲಿ ಜರಗಿದ `ಆಷಾಡ ಗಂಜಿ' ಕಾರ್ಯಕ್ರಮವನ್ನು ಗ್ರಾಮಪಂಚಾಯತು ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಅವರು ಮಾತನಾಡುತ್ತಾ, ಆಷಾಡ ಮಾಸದಲ್ಲಿ ಆರೋಗ್ಯಕರ ಪರಂಪರೆ ಹಾಗೂ ಆಹಾರ ಪದ್ಧತಿಯ ಮಹತ್ವವನ್ನು ತಿಳಿಸುತ್ತಾ, ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಇಂತಹ ಪಾರಂಪರಿಕ ಆರೋಗ್ಯಕರ ಆಹಾರ ಕ್ರಮಗಳು ಇಂದಿನ ಯುವ ಜನತೆಗೆ ಮತ್ತು ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಕುಟುಂಬಶ್ರೀಯವರ ಈ ರೀತಿಯ ಸಮಾಜಮುಖಿ ಹಾಗೂ ಸಂಸ್ಕೃತಿಯುಕ್ತ ಕಾರ್ಯಕ್ರಮಗಳು ಅಭಿನಂದನಾರ್ಹ ಎಂದರು. ಗ್ರಾಮಪಂಚಾಯತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದರು. ಗ್ರಾಮಪಂಚಾಯತು ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಜಿಲ್ಲಾ ಪಂಚಾಯತು ಸದಸ್ಯ ರಾಮಪ್ಪ ಮಂಜೇಶ್ವರ, ಗ್ರಾಮಪಂಚಾಯತು ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮಪ್ರಸಾದ ಮಾನ್ಯ, ಗಂಗಾಧರ ಗೋಳಿಯಡ್ಕ, ಮಧುಸೂದನ ಕಂಗಿಲ, ಹರೀಶ ಕೆ., ಶಾಹಿನಾ, ಅನ್ನತ್ ಬೀವಿ, ಪ್ರಜ್ಞಾ, ಶ್ಯಾಮಪ್ರಸಾದ ಸರಳಿ, ಲೀಲಾವತಿ, ಉಷಾ ಮೊದಲಾದವರು ಪಾಲ್ಗೊಂಡಿದ್ದರು. ಗ್ರಾಮಪಂಚಾಯತಿನ ವಿವಿಧ ಕುಟುಂಬಶ್ರೀಗಳು, ಎಡಿಎಸ್ ಸಿಡಿಎಸ್ ಸದಸ್ಯರು ಆಟಿ ವಿಶೇಷ ತಿನಿಸುಗಳೊಂದಿಗೆ ಪಾಲ್ಗೊಂಡಿದ್ದರು. ಅತೀ ಹೆಚ್ಚು ತಿನಿಸುಗಳನ್ನು ಪ್ರದರ್ಶಿಸಿದವರಿಗೆ ವಿಶೇಷ ಬಹುಮಾನ ವಿತರಿಸಲಾಯಿತು. ಸಿಡಿಎಸ್ ಅಧ್ಯಕ್ಷೆ ಸುಲೋಚನ ಸ್ವಾಗತಿಸಿ, ಸೋಫಿಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಡಿಎಸ್ ಉಪಾಧ್ಯಕ್ಷೆ ಜಯಂತಿ ಕುಂಟಿಕಾನ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಪಂಚಾಯತು ಸಹಾಯಕ ಕಾರ್ಯದರ್ಶಿ ಸಜಿ ವಂದಿಸಿದರು.
Tags
ಬದಿಯಡ್ಕ
