ಸ್ನೇಹ ಸಂಬಂಧದಿಂದ ದೂರ ಸರಿದ ಕೋಪ; ಯುವತಿಯನ್ನು ಕೊಲೆಗೈಯ್ಯಲು ಹೆಣ್ಣಿನ ವೇಷ ಧರಿಸಿ ಆಗಮಿಸಿದ 5 ಮಂದಿಯ ಸೆರೆ


 ಗುರುವಾಯೂರು: ಸ್ಪಾ ಕಂಪನಿ ಉದ್ಯೋಗಿ ಯುವತಿಯನ್ನು ಕೊಲೆ ಮಾಡಲು ಹೆಣ್ಣಿನ ವೇಷದಲ್ಲಿ ಗುರುವಾಯೂರಿಗೆ ಆಗಮಿಸಿದ ಐದು ಜನರ ತಂಡ ಪೊಲೀಸರು ಬಂಧಿಸಿದ್ದಾರೆ.

ತ್ರಿಶೂರಿನಲ್ಲಿ ಕೆಲಸ ಮಾಡುವ ಯುವತಿ ಓರ್ವನ ಜತೆಯಿದ್ದ ಸ್ನೇಹ ಸಂಬಂಧದಿಂದ ಹಿಂದೆ ಸರಿದ ಕೋಪದಿಂದ ಆಕೆಯನ್ನು ಹತ್ಯೆಗೈಯ್ಯಲು ತಂಡ ಆಗಮಿಸಿದೆಯೆಂದು ಕ ಪೊಲೀಸರು ತಿಳಿಸಿದ್ದಾರೆ.

ತೊಡುಪುಳ ಮುಟ್ಟಂ ನಿವಾಸಿಗಳಾದ ಒಟ್ಟಪ್ಲಾಕಲ್ ಮನೆಯ ಆದರ್ಶ್, ಚೋಲಮಟ್ಟತಿಲ್ ಪ್ರಸಾದ್, ತೈಪರಂಬಿಲ್ ಬಿನೀಶ್, ತೇಂಗಿಲ್ ಶಾಹಿದ್ ಮತ್ತು ಕಾರಕ್ಕುನ್ನೆಲ್ ಸ್ಟೀಫನ್  ಬಂಧಿತ ಆರೋಪಿಗಳು. ಗುರುವಾಯೂರು  ಪಶ್ಚಿಮ ದ್ವಾರದಲ್ಲಿ ಹೆಣ್ಣಿನ ವೇಷದಲ್ಲಿ ಶಂಕಿತ ರೀತಿಯಲ್ಲಿ ಕಂಡುಬಂದ ಪ್ರಸಾದ್ ಅವರನ್ನು ಮೊದಲು ಪೊಲೀಸರು ವಶಕ್ಕೆ ಪಡೆದರು. ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದ ನಂತರ ಕಾರಿನಲ್ಲಿ ತಿರುಗಾಡುತ್ತಿದ್ದ ನಾಲ್ವರ ತಂಡವನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಇವರಿಂದ 16 ಗ್ರಾಂ ಗಾಂಜಾವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತ್ರಿಶೂರಿನ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಇವರು ಕೊಲೆ ಮಾಡಲು ಯೋಜಿಸಿದ್ದರು. ಐವರ ತಂಡ ತ್ರಿಶೂರಿಗೆ ಆಗಮಿಸಿದೆ ಎಂದು ತಿಳಿದ ಯುವತಿಯು ಗುರುವಾಯೂರಿಗೆ ಸ್ಥಳಾಂತರಗೊಂಡಿದ್ದಳು. ಬಂಧಿತರಾದ ಪ್ರಸಾದ್ ಮತ್ತು ಆದರ್ಶ್ ಕೊಲೆ ಯತ್ನ ಸೇರಿದಂತೆ 20 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಯುವತಿಯನ್ನು ನಂತರ ಪೊಲೀಸರು ಪತ್ತೆ ಹಚ್ಚಿ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು