ಮುಳಿಯಾರು ಪಂಚಾಯತ್‌ನಲ್ಲಿ ಇಂದಿನಿಂದ ಸಂದರ್ಶಕರಿಗೆ ಚಹಾ ಸತ್ಕಾರ


 ಗ್ರಾಮ ಪಂಚಾಯತು ಅಧ್ಯಕ್ಷ ಅಧ್ಯಕ್ಷ ಕೆ.ಬಿ. ಮುಹಮ್ಮದ್ ಕುಂಞಿ

ಬೊವಿಕಾನ: ಮುಳಿಯಾರು ಗ್ರಾಮ ಪಂಚಾಯತ್‌ಗೆ ವಿವಿಧ ಕೆಲಸಗಳಿಗಾಗಿ ಆಗಮಿಸುವ ಸಂದರ್ಶಕರಿಗೆ ಇನ್ನು ಮುಂದೆ ಚಹಾ ಸತ್ಕಾರವನ್ನು ಏರ್ಪಡಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಇಂತಹ ವ್ಯವಸ್ಥೆಯನ್ನು ಮಾಡಲಾಗಿದೆ.

ಚಹಾ ವೆಂಡಿಂಗ್ ಯಂತ್ರದ ಉದ್ಘಾಟನೆಯು ಇಂದು ಬೆಳಿಗ್ಗೆ 11 ಗಂಟೆಗೆ ಅಧ್ಯಕ್ಷ ಕೆ.ಬಿ. ಮುಹಮ್ಮದ್ ಕುಂಞಿ ಅವರು ನೆರವೇರಿಸಲಿದ್ದಾರೆ. ಬೊವಿಕಾನ ಬಿ.ಎ.ಆರ್ ಹೈಯರ್ ಸೆಕೆಂಡರಿ ಶಾಲೆಯ ಮ್ಯಾನೇಜರ್ ಗಂಗಾಧರನ್ ಪಾಡಿ ಅವರು ಈ ವೆಂಡಿಂಗ್ ಯಂತ್ರವನ್ನು ಪ್ರಾಯೋಜಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು