ಬಂಟರ ಸಂಘ ಬದಿಯಡ್ಕ ಆಶ್ರಯದಲ್ಲಿ ಬಂಟೆರೆನ ಆಟಿದ ಲೇಸ್ ಕಾರ್ಯಕ್ರಮ ಅಗಸ್ಟ್ 9 ಆದಿತ್ಯವಾರದಂದು


 ಬದಿಯಡ್ಕ: ಬಂಟರ ಸಂಘ ಬದಿಯಡ್ಕ ಇದರ ಆಶ್ರಯದಲ್ಲಿ ಬಂಟೆರೆನ ಆಟಿದ ಲೇಸ್ ಕಾರ್ಯಕ್ರಮ ಅಗಸ್ಟ್ 9 ಆದಿತ್ಯವಾರ ವಳಮಲೆ ಇರಾ ಸಭಾ ಭವನದಲ್ಲಿ ಜರಗಲಿರುವುದು. 2 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಐ.ಸುಬ್ಬಯ್ಯ ರೈ ಉದ್ಘಾಟಿಸುವರು. ಬಂಟರ ಸಂಘ ಬದಿಯಡ್ಕ ಇದರ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸುವರು. ಪ್ರಧಾನ ಕಾರ್ಯದರ್ಶಿ

ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸುವರು. ನಿವೃತ್ತ ಪ್ರಾಂಶುಪಾಲ ಡಾ.ಯತೀಶ್ ಕುಮಾರ್ ರೈ ಅವರು ಆಟಿ ತಿಂಗಳ ವಿಶೇಷ ಉಪಾನ್ಯಾಸ ನೀಡುವರು.

ಮುಖ್ಯ ಅತಿಥಿಗಳಾಗಿ ಚಂದ್ರಹಾಸ ರೈ ಪೆರಡಾಲ ಗುತ್ತು, ಚಿದಾನಂದ ರೈ ಮಂಜೇಶ್ವರಿ, ಸಂತೋಷ್ ಕುಮಾರ್ ಶೆಟ್ಟಿ ಬಜಗುತ್ತು, ಅಶೋಕ್ ರೈ ಕೊರ್ಪಳ, ಗಂಗಾಧರ ಆಳ್ವ ಪೆರಡಾಲ, ರವೀಂದ್ರನಾಥ ಶೆಟ್ಟಿ ವಳಮಲೆ, ಗಿರೀಶ್ ರೈ ವಳಮಲೆ, ಜಗನ್ನಾಥ ರೈ ಕೊರೆಕ್ಕಾನ, ಉಮೇಶ್ ರೈ ಮೇಗಿನ ಕಡಾರು, ಜಗನ್ನಾಥ ರೈ ಪೆರಡಾಲ ಗುತ್ತು, ಸಂತೋಷ್ ಕುಮಾರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಕಡಾರು ಬೀಡು ಮೊದಲಾದವರು ಭಾಗವಹಿಸುವರು. ದಯಾನಂದ ರೈ  ಕಡಾರು ವಂದಿಸುವರು.ಅಶ್ವಿನಿ ಪ್ರದೀಪ್ ಶೆಟ್ಟಿ ನಿರೂಪಿಸುವರು. ಅನಂತರ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ  ಜರಗಲಿವೆ.ಬಂಟ ಜನಪ್ರತಿನಿಧಿಗೆ ಅಭಿನಂದನೆ, ಎಸ್ ಎಲ್ ಸಿ ಪ್ಲಸ್ ಟು ವಿದ್ಯಾರ್ಥಿಗಳಿಗೆ ಎಲ್ಲ ವಿಷಯದಲ್ಲಿ A ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ನಾಟಿ ತಿಂಡಿ ತಿನಿಸುಗಳ ಪ್ರದರ್ಶನ, ಬಂಟರ ಶೈಲಿಯ ಉಪಹಾರ ಇರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು