ಅತಿ ತೀವ್ರ ಮಳೆ ಸಾಧ್ಯತೆ; ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ನಾಳೆಯೂ ರಜೆ



ಕಾಸರಗೋಡು: ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ನಾಳೆಯೂ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ. ಕೇಂದ್ರ ಹವಾಮಾನ ಇಲಾಖೆಯು ಇಂದು ಅತಿ ಭಾರಿ ಮಳೆಯ ರೆಡ್ ಅಲರ್ಟ್ ಹಾಗೂ ನಾಳೆ ಭಾರಿ ಮಳೆಯ ಆರೆಂಜ್ ಅಲರ್ಟ್ ಪ್ರಕಟಿಸಿದೆ.

ಸತತ ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಜಲಾಶಯಗಳು ಉಕ್ಕಿ ಹರಿಯುತ್ತಿದ್ದು, ನೀರು ನಿಂತು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ವೃತ್ತಿಪರ (ಪ್ರೊಫೆಷನಲ್) ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಪ್ರಕಟಿಸಲಾಗಿದೆ.

ಕಾಲೇಜುಗಳು, ಪ್ರೊಫೆಷನಲ್ ಕಾಲೇಜುಗಳು, ಶಾಲೆಗಳು, ಅಂಗನವಾಡಿಗಳು, ಟ್ಯೂಷನ್ ಸೆಂಟರ್‌ಗಳು, ICSE, CBSE ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ಮದ್ರಸಾ ಮುಂತಾದ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೂ ಈ ರಜೆ ಅನ್ವಯಿಸಲಿದೆ.

ಆದರೆ, ಪೂರ್ವನಿಗದಿತ ವಿಶ್ವವಿದ್ಯಾಲಯ/ಸಾಮಾನ್ಯ ಪರೀಕ್ಷೆಗಳು ಮತ್ತು ಸಂದರ್ಶನಗಳಿಗೆ (ಇಂಟರ್‌ವ್ಯೂ) ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು