ಬದಿಯಡ್ಕ ಶ್ರೀನಿಧಿ ಕ್ಲಿನಿಕ್ ನಲ್ಲಿ ಆಟಿ ಅಮವಾಸ್ಯೆ ಅಂಗವಾಗಿ ಪಾಲೆ ‌ಮರದ ಕೆತ್ತೆಯ ಕಷಾಯ ವಿತರಣೆ



ಬದಿಯಡ್ಕ: ಬದಿಯಡ್ಕ ಶ್ರೀನಿಧಿ ಕ್ಲಿನಿಕ್ ನಲ್ಲಿ ಆಟಿ ಅಮವಾಸ್ಯೆ ಅಂಗವಾಗಿ ಪಾಲೆ ‌ಮರದ ಕೆತ್ತೆಯ ಕಷಾಯ ವಿತರಣೆ ನಡೆಯಿತು.


ಕಾರ್ಯಕ್ರಮದಲ್ಲಿ ಪಿ.ವಿ.ಭಟ್ ಪಟ್ಟಾಜೆ ಪ್ರಾರ್ಥನೆ ಹಾಡಿದರು.‌ ಧಾರ್ಮಿಕ ಮುಂದಾಳು  ಗೋಪಾಲಕೃಷ್ಣ ವಾಂತಿಚಾಲು ಅವರು ಪಾಲೆ ಮರದ ಕಷಾಯದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 



ಹಲವಾರು ಗಣ್ಯರು ಉಪಸ್ಥಿತರಿದ್ದರು. 350 ಕ್ಕೂ ಹೆಚ್ಚು ಮಂದಿ ಕಷಾಯ ಸ್ವೀಕರಿಸಿದರು. ಡಾ.ಶ್ರೀನಿಧಿ ಸರಳಾಯ, ಸುಂದರ ಬಾರಡ್ಕ, ಶ್ರೀಷನ್ ಬಾರಡ್ಕ, ದೀಕ್ಷಿತ್ ಬಾರಡ್ಕ ‌ಮೊದಲಾದವರು ಕಷಾಯ ಸಿದ್ದಪಡಿಸಲು ನೇತೃತ್ವ ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು