ಕಾಞಂಗಾಡ್: ಡಿಸಂಬರ್ 26 ರಂದು ಮದುವೆ ನಿಶ್ಚಿತಾರ್ಥ ನಡೆದ ಬ್ಯಾಂಕ್ ಉದ್ಯೋಗಿ ಯುವತಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಪೂಚಕ್ಕಾಡ್ ಕೀಳೇಕರೆಯಲ್ಲಿ ತಯಿಲ್ ಮನೆಯ ಕೆ. ಚಂದ್ರನ್ ಮತ್ತು ರೀನಾ ದಂಪತಿಯ ಪುತ್ರಿ ಪಿ. ಅನುಶ್ರೀ (25) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕದ ಹುಣಸೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು.
ಮದುವೆ ನಿಶ್ಚಯವಾಗಿದ್ದ ಯುವತಿಯಾಗಿದ್ದು, ಡಿಸೆಂಬರ್ 26 ರಂದು ಮದುವೆ ನಿಗದಿಯಾಗಿತ್ತು. ಉದ್ಯೋಗದಲ್ಲಿರುವ ಬ್ಯಾಂಕ್ ನ ಸಮೀಪದಲ್ಲೇ ಇರುವ ವಸತಿಯಲ್ಲಿ ಅನುಶ್ರೀ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಚಂದ್ರನ್ ಅವರು ನೀಲೇಶ್ವರದ ಮಲಬಾರ್ ಗ್ಯಾಸ್ ಡಿಸ್ಟ್ರಿಬ್ಯೂಷನ್ ಏಜೆನ್ಸಿ ನಡೆಸುತ್ತಿದ್ದಾರೆ.
ಚಂದ್ರನ್‌ಗೆ ಇಬ್ಬರು ಹೆಣ್ಣುಮಕ್ಕಳು. ಎರಡನೆಯ ಮಗಳು ಪಿ. ಶ್ರೀಲಕ್ಷ್ಮಿ ಕೇರಳ ಪೊಲೀಸ್ ಕೋಚಿಂಗ್‌ಗೆ ಓದುತ್ತಿದ್ದಾರೆ. ವಿಷಯ ತಿಳಿದು ಸಂಬಂಧಿಕರು ಅಲ್ಲಿಗೆ ತೆರಳಿದ್ದಾರೆ.
Tags
ಕಾಞಂಗಾಡ್
